ಅವಧಿಗೆ ಮುನ್ನ ಬಿಡುಗಡೆಗೆ ಒತ್ತಾಯಿಸಿ ಎರಡು ದಿನಗಳಿಂದ ವೆಲ್ಲೂರು ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಬುಧವಾರ ಉಪವಾಸ ಅಂತ್ಯಗೊಳಿಸಿದ್ದಾಳೆ. ಕಾನೂನಿನ ಪ್ರಕಾರ ಬೇಡಿಕೆ ಪರಿಗಣಿಸುವ ಭರವಸೆ ನೀಡಿದ ನಂತರ ನಳಿನಿ ಉಪವಾಸ ಅಂತ್ಯಗೊಳಿಸಿದಳು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.