ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾರೋದೇವಿಗೆ ಮನುಷ್ಯನ ರಕ್ತತರ್ಪಣ ಕಡ್ಡಾಯವಂತೆ! (Cooch behar | Baro devi | Temple | Nara Narayan | West Bengal)
 
ಶತಮಾನಗಳಿಂದ ನಡೆದು ಬಂದಿರುವ ಸಂಪ್ರದಾಯದಂತೆ ಇಲ್ಲಿನ ರಾಜಮನೆತನದವರು ಆಚರಿಸುವ ಬಾರೋದೇವಿ ಪೂಜೆಗೆ ಪ್ರತಿವರ್ಷವೂ ಮನುಷ್ಯನ ರಕ್ತತರ್ಪಣ ಕಡ್ಡಾಯವಂತೆ!

15ನೇ ಶತಮಾನದಲ್ಲಿ ಇಲ್ಲಿ ಆಡಳಿತ ನಡೆಸಿದ್ದ ಮಹಾರಾಜ ನರನಾರಾಯಣನಿಗೆ ಒಮ್ಮೆ ಕನಸಿನಲ್ಲಿ ದೇವಿ ಕಾಣಿಸಿಕೊಂಡಳಂತೆ. ನಂತರ ರಾಜ ಕನಸಿನಲ್ಲಿ ಕಂಡ ದೇವಿಯ ಪ್ರತಿಮೆಯನ್ನು ಮಣ್ಣಿನಲ್ಲಿ ತಯಾರಿಸಿ ಅದಕ್ಕೆ ಬಾರೋದೇವಿ ಎಂದು ನಾಮಕರಣ ಮಾಡಿ ಪೂಜಿಸಲು ಆರಂಭಿಸಲಾಗಿತ್ತಂತೆ.

ಹಿಂದೆ 100ರಿಂದ 150 ಜನರನ್ನು ರಾಜ ಪ್ರತಿವರ್ಷವೂ ದೇವಿಗೆ ಬಲಿಕೊಡುತ್ತಿದ್ದನಂತೆ. ಆದರೆ ಇದೀಗ ಮಾನವ ಬಲಿ ಸಾಧ್ಯವಿಲ್ಲವಾದ್ದರಿಂದ ಅಕ್ಕಿ ಹಿಟ್ಟಿನಿಂದ ತಯಾರಿಸಿ ಮೂರ್ತಿಯನ್ನು ದೇವರಿಗೆ ಬಲಿ ಕೊಡಲಾಗುತ್ತದೆ. ಆದರೆ ಇದೇ ಊರಿನ ಶಿಬೇನ್ ರಾಯ್ ಎಂಬಾತ ಹಲವು ವರ್ಷಗಳಿಂದ ಪ್ರತಿವರ್ಷ ತನ್ನ ಕೈಬೆರಳು ಕತ್ತರಿಸಿ ಅದರ ರಕ್ತವನ್ನು ಅರ್ಪಿಸುತ್ತಿದ್ದಾನೆ. ಅದಕ್ಕಾಗಿ ಪಶ್ಚಿಮಬಂಗಾಳದ ಪ್ರವಾಸೋದ್ಯಮ ಮಂಡಳಿ ಆತನಿಗೆ 500 ರೂಪಾಯಿ ನೀಡುತ್ತದೆಯಂತೆ!
ಸಂಬಂಧಿತ ಮಾಹಿತಿ ಹುಡುಕಿ