ಹಣ ಮತ್ತು ಒಡವೆಗಳ ಆಸೆಗಾಗಿ ತಾಯಿ-ಮಗನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ದಕ್ಷಿಣ ಭಾಗದ ಪೋಸ್ಟಲ್ ಕಾಲೊನಿಯ ಫ್ಲ್ಯಾಟ್‌ನಲ್ಲಿ ಶುಕ್ರವಾರ ನಡೆದಿದೆ. ಮೃತರು ಬೆಂಗಳೂರಿನ ನಿವಾಸಿಗಳಾಗಿದ್ದು ಈ ಘಟನೆ ನಗರವನ್ನು ತಲ್ಲಣಗೊಳಿಸಿದೆ. ಬೆಂಗಳೂರಿನ ಸಂಗೀತ ಶಿಕ್ಷಕಿ ಅನಂತಲಕ್ಷ್ಮಿ (39) ಹಾಗೂ ಅವರ 13 ವರ್ಷದ ಪುತ್ರ ಸೂರಜ್ ಕೊಲೆಯಾದವರು.