ಟ್ವಿಟ್ಟರ್‌ನಿಂದ ಪೇಚಿಗೆ ಸಿಲುಕಿದ್ದ ಕೇಂದ್ರ ಸಚಿವ ಶಶಿ ತರೂರ್ ಇನ್ನು ಮುಂದೆ ಅದರ ಗೊಡವೆಯೇ ಬೇಡ ಎಂದು ಸುಮ್ಮನಿರುತ್ತಾರೆ ಎಂದು ಯಾರಾದರೂ ಅಂದುಕೊಂಡಿದ್ದರೆ, ಖಂಡಿತ ಇಲ್ಲ ಎಂಬ ಸ್ಪಷ್ಟನೆ ಅವರಿಂದಲೇ ಬಂದಿದೆ.
ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಟ್ವೀಟ್ ಮಾಡುತ್ತಾರೆ. ಅಲ್ಲಿನ ಸಚಿವೆ ಹಿಲರಿ ಟ್ವೀಟ್ ಮಾಡುತ್ತಾರೆ. ಆಸ್ಟ್ರೇಲಿಯಾ ಪ್ರಧಾನಿ ರುಡ್ ಕೂಡ ಟ್ವೀಟ್ ಮಾಡುತ್ತಾರೆ. ಟ್ವಿಟ್ಟರ್ ಇಂದಿನ ಪ್ರಬಲ ಮಾಧ್ಯಮಗಳಲ್ಲೊಂದು. ನಾನಂತೂ ಅದನ್ನು ಬಿಡುವುದಿಲ್ಲ. ಆದರೆ ಶೈಲಿ ಸ್ವಲ್ಪ ಬದಲಾಯಿಸಿಕೊಳ್ಳುವೆ ಎಂದು ನಿಯತಕಾಲಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತರೂರ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ವಿಮಾನದ ಎಕಾನಮಿ ದರ್ಜೆಯನ್ನು ದನದ ದೊಡ್ಡಿ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದರು.