ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕನ್ನಡಿಗ ಸಂತೋಷ್ ಸೇರಿ 11ಸಂಶೋಧಕರಿಗೆ ಭಟ್ನಾಗರ್ ಪ್ರಶಸ್ತಿ (Shanti Swarup Bhatnagar | scientists | CSIR | Science)
 
ಕನ್ನಡಿಗ ಸಂತೋಷ್ ಹೊನ್ನಾವರ ಅವರಿಗೆ ದೇಶದ ಅತ್ಯುನ್ನತ ವಿಜ್ಞಾನ ಪ್ರಶಸ್ತಿ ಲಭಿಸಿದೆ. ಹೈದರಾಬಾದ್‌ನ ಎಲ್.ವಿ.ಪ್ರಸಾದ್ ನೇತರ ಸಂಸ್ಥೆಗೆ ಸೇರಿದವರಾದ ಸಂತೋಷ್ ಸೇರಿದಂತೆ 11ಸಂಶೋಧಕರು ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಂತೋಷ್ ಹೊನ್ನಾವರ, ರಾಮನ್ ರೀಸರ್ಚ್ ಇನ್ಸ್‌ಟಿಟ್ಯೂಟ್ ಅಭಿಷೇಕ್ ಧಾರ್, ಹೈದರಾಬಾದ್ ವಿವಿಯ ವೇನಾಪಳ್ಳಿ ಸುರೇಶ್, ಹರೀಶ್ ಚಂದ್ರ ರೀಸರ್ಚ್ ಇನ್ಸ್‌ಟಿಟ್ಯೂಟ್‌ನ ರಾಜೇಶ್ ಗೋಪಕುಮಾರ್, ಐಐಎಸ್ ಸಂಸ್ಥೆಯ ಗಿರಿಧರ್ ಮದ್ರಾಸ್, ಜಯಂತ್ ರಾಮಸ್ವಾಮಿ ಹರಿತ್ಸಾ ಮತ್ತು ನಾರಾಯಣಸ್ವಾಮಿ ಜಯರಾಮನ್, ದಿಲ್ಲಿ ಐಐಟಿಯ ಚಾರುಸಿತಾ ಚಕ್ರವರ್ತಿ, ಜವಾಹರಲಾಲ್ ನೆಹರೂ ಕೇಂದ್ರದ ಅಮಿತಾಬ್ ಜೋಶಿ ಹಾಗೂ ಎನ್‌ಸಿಸಿಎಸ್‌ನ ಭಾಸ್ಕರ್ ಸಹಾ ಅವರೆಲ್ಲರಿಗೂ ಬೇರೆ ಬೇರೆ ವಿಭಾಗಗಳಲ್ಲಿ ಭಟ್ನಾಗರ್ ಪ್ರಶಸ್ತಿ ಸಿಕ್ಕಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಎಲ್ಲಾ ಪ್ರಶಸ್ತಿ ವಿಜೇತ ಸಂಶೋಧಕರಿಗೆ ಐದು ಲಕ್ಷ ರೂಪಾಯಿ ನಗದು ಹಾಗೂ ಫಲಕಗಳನ್ನು ನೀಡಿ ಗೌರವಿಸಲಿದ್ದಾರೆ. ಕನ್ನಡಿಗ ಸಂತೋಷ್ ಹೊನ್ನಾವರ ಅವರ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆಗೆ ಈ ಪ್ರಶಸ್ತಿಯ ಗೌರವ ಸಿಕ್ಕಿದೆ. ಅವರು ಹೈದರಾಬಾದ್ ಮೂಲದ ಪ್ರಸಾದ್ ನೇತ್ರ ಸಂಸ್ಥೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ. ಬೆಂಗಳೂರಿನ ಸಿಟಿ ಮಾರ್ಕೆಟ್ ಸಮೀಪವಿರುವ ಬಿಎಂಸಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದ ಸಂತೋಷ್ ಹೊನ್ನಾವರ ಅವರು ನವದೆಹಲಿಯಲ್ಲಿ ಎಐಐಎಂಎಸ್‌ನಲ್ಲಿ ಸ್ನಾತಕೋತ್ತರ ತರಬೇತಿ ಪಡೆದಿದ್ದರು.

ಸಂತೋಷ್ ಹೊನ್ನಾವರ ಅವರು ಅಮೆರಿಕದ ಫಿಲಡೆಲ್ಫಿಯಾದ ವಿಲ್ಸ್ ಐ ಹಾಸ್ಪಿಟಲ್‌ನಲ್ಲಿ ಅಕ್ಯುಲರ್ ಅನ್ಕೋಲಜಿ ವಿಷಯದಲ್ಲಿ ವಿಶೇಷ ಶಿಕ್ಷಣ ಪಡೆದಿದ್ದಾರೆ. ವಿಶ್ವಾದ್ಯಂತ ಹಲವಾರು ವೈದ್ಯಕೀಯ ಸಂಸ್ಥೆಗಳು ಸಂತೋಷ್ ಅವರನ್ನು ವಿಶೇಷವಾಗಿ ಗುರುತಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ