ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಧ್ಯಪ್ರದೇಶದಲ್ಲಿ ನಾಲ್ವರು ನಕ್ಸಲೀಯರ ಸೆರೆ (Chhattisgarh | Madhya Pradesh | Naxals | Shahdol)
 
ಇಲ್ಲಿಂದ ಸುಮಾರು 450ಕಿ.ಮೀ.ದೂರದಲ್ಲಿರುವ ಮಧ್ಯಪ್ರದೇಶದ ಶಾದೂಲ್ ಜಿಲ್ಲೆಯಲ್ಲಿ ನಾಲ್ಕು ಮಂದಿ ಶಂಕಿತ ನಕ್ಸಲೀಯರನ್ನು ಸೆರೆಹಿಡಿಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ನೆರೆಯ ಚತ್ತೀಸ್‌ಗಢದಿಂದ ರೈಲಿನಲ್ಲಿ ಆಗಮಿಸಿದ್ದ ಸುಮಾರು 7 ಮಂದಿಯನ್ನು ಸೆರೆ ಹಿಡಿದಿರುವುದಾಗಿ ಶಾದೂಲ್ ಪೊಲೀಸ್ ವರಿಷ್ಠಾಧಿಕಾರಿ ಲಖನ್‌ಲಾಲ್ ಅಹಿರ್‌ವಾರ್ ಹೇಳಿದರು.

ಬಂಧಿತ ಏಳು ಮಂದಿಯಲ್ಲಿ ನಾಲ್ವರು ನಕ್ಸಲೀಯರು ಎಂಬುದಾಗಿ ಒಪ್ಪಿಕೊಂಡಿದ್ದಾರೆ. ಅವರನ್ನು ತನಿಖೆಗೊಳಪಡಿಸಲಾಗಿದ್ದು, ಅವರಿಗೆ ನಕ್ಸಲೀಯರೊಂದಿಗೆ ಇರುವ ಸಂಪರ್ಕ, ಯೋಜನೆಯ ಬಗ್ಗೆ ತಿಳಿದುಕೊಳ್ಳಲಾಗುವುದು ಎಂದು ವಿವರಿಸಿದರು.

ಬಂಧಿತರ ವಿಚಾರಣೆಗಾಗಿ ಚತ್ತೀಸ್‌ಗಢ ಪೊಲೀಸರು ಶಾದೂಲ್‌ಗೆ ಆಗಮಿಸಲಿದ್ದಾರೆ ಎಂದರು. ಕೆಲವು ನಕ್ಸಲೀಯರು ಶಾದೂಲ್‌ನಲ್ಲಿ ಕಾರ್ಯಾಚರಣೆ ನಡೆಸಲು ಆಗಮಿಸಲಿದ್ದಾರೆಂಬ ಮಾಹಿತಿಯನ್ನು ಚತ್ತೀಸ್‌ಗಢ ಪೊಲೀಸರು ಮಾಹಿತಿ ನೀಡಿರುವುದಾಗಿಯೂ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ