ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಗೆ 11 ವಿಜ್ಞಾನಿಗಳ ಆಯ್ಕೆ
ನವದೆಹಲಿ, ಸೋಮವಾರ, 28 ಸೆಪ್ಟೆಂಬರ್ 2009( 10:29 IST )
ರಾಮನ್ ಸಂಶೋಧನಾ ಸಂಸ್ಥೆಯ ಅಭಿಷೇಕ್ ಧರ್, ಎಲ್.ವಿ.ಪ್ರಸಾದ್ ನೇತ್ರ ಸಂಸ್ಥೆಯ ಸಂತೋಷ್ ಹೊನಾವರ್ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ವೆನಪಲ್ಲಿ ಸುರೇಶ್ ಸೇರಿದಂತೆ 11 ಮಂದಿ ವಿಜ್ಞಾನಿಗಳು 2009ನೇ ಸಾಲಿನ ಪ್ರತಿಷ್ಠಿತ ಶಾಂತಿ ಸ್ವರೂಪ್ ಭಟ್ನಾಗರ್ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.