ವಿಮಾನ ಟೇಕಾಫ್ ಆಗುವ ಹಂತದಲ್ಲಿ ಇಲಿಯೊಂದು ಪತ್ತೆಯಾಗಿ ಸಿಬ್ಬಂದಿಯನ್ನು ಆತಂಕಕ್ಕೆ ದೂಡಿದ ಘಟನೆ ನಡೆದಿದೆ. ಟೊರಾಂಟೊಗೆ ತೆರಳಬೇಕಿದ್ದ ಏರ್‌ಇಂಡಿಯಾ ವಿಮಾನ ದೆಹಲಿ ಮಾರ್ಗವಾಗಿ ಇಲ್ಲಿನ ರಾಜಸಾನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಇಲ್ಲಿಂದ ಹೊರಡುವ ವೇಳೆಯಲ್ಲಿ ಇಲಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಯಿತು.
ಇದರಿಂದ ಗಾಬರಿಗೊಂಡ ಅಧಿಕಾರಿಗಳು ವಿಮಾನದಲ್ಲಿದ್ದ ಎಲ್ಲ 147 ಪ್ರಯಾಣಿಕರನ್ನು ಇಳಿಸಿದರು. ಹಾಗೂ ಇಲಿಗಾಗಿ ಶೋಧನೆ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಟೊರಾಂಟೊಗೆ ಕಳುಹಿಸಲಾಯಿತು.
ಒಂದು ಇಲಿಗಾಗಿ ವಿಮಾನವನ್ನೇ ಬದಲಾಯಿಸುತ್ತಾರಾ ಎಂು ಆಶ್ಚರ್ಯ ಪಡಬೇಡಿ. ಇಲಿಯಿಂದ ಎಂಜಿನ್‌ಗೆ ತೊಂದರೆಯುಂಟಾಗಿ ವಿಮಾನ ಅಪಘಾತಕ್ಕೀಡಾಗುವ ಸಾಧ್ಯತೆ ಇದ್ದುದರಿಂದ ಪ್ರಯಾಣ ರದ್ದುಗೊಳಿಸಲು ಎಂಜಿನಿಯರ್ ಮತ್ತು ತಾಂತ್ರಿಕ ಸಿಬ್ಬಂದಿ ನಿರ್ಧರಿಸಿದರು ಎಂಬುದು ಗಮನಾರ್ಹ.