ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೋಪಿಯನ್ ಪ್ರಕರಣ: ಸಿಬಿಐನಿಂದ ಶವದ ಮರುಪರೀಕ್ಷೆ (Shopian rape | CBI | Kashmir Valle | Srinagar | SIT)
 
ಶೋಪಿಯನ್ ಹತ್ಯಾ ಪ್ರಕರಣದ ಮರು ತನಿಖೆಗಾಗಿ ಹತ್ಯೆಗೊಳಗಾದ ಇಬ್ಬರು ವ್ಯಕ್ತಿಗಳ ಶವವನ್ನು ಗೋರಿಯಿಂದ ಹೊರ ತೆಗೆದು ಮರುಪರೀಕ್ಷೆಗೊಳಪಡಿಸುವ ಕಾರ್ಯ ಸೋಮವಾರ ಆರಂಭಗೊಂಡಿದೆ.

ಕೇಂದ್ರ ತನಿಖಾ ಸಂಸ್ಥೆಯು (ಸಿಬಿಐ) ಶವಗಳ ಮರುಪರೀಕ್ಷೆಗಾಗಿ ಮೃತ ವ್ಯಕ್ತಿಗಳ ಕುಟುಂಬ ಸದಸ್ಯರ ಅನುಮತಿ ಪಡೆದಿತ್ತು. ಸಿಬಿಐ ಒಂದು ವಾರದ ಹಿಂದೆ ಈ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿತ್ತು.

ಇದೇ ವರ್ಷದ ಮೇ 29 ಮತ್ತು 30ರ ನಡುವಿನ ರಾತ್ರಿಯಲ್ಲಿ ಶೋಪಿಯನ್‌ನಲ್ಲಿ 17ವರ್ಷದ ಆಸಿಯಾ ಮತ್ತು 22ರ ಹರೆಯದ ನೀಲೋಫರ್ ಎಂಬುವವರನ್ನು ಅತ್ಯಾಚಾರ ಮಾಡಿ ಹತ್ಯೆಗೈಯಲಾಗಿತ್ತು. ಈ ಜೋಡಿ ಕೊಲೆ ಪ್ರಕರಣ ಆಗಿನಿಂದಲೂ ರಾಷ್ಟ್ರಮಟ್ಟದಲ್ಲಿ ವಿವಾದ ಹುಟ್ಟುಹಾಕಿತ್ತು.

ಜಮ್ಮು-ಕಾಶ್ಮೀರದ ವಿಶೇಷ ತನಿಖಾ ತಂಡ(ಎಸ್‌ಐಟಿ) ಈ ಸೂಕ್ಷ್ಮ ಪ್ರಕರಣದ ತನಿಖೆ ನಡೆಸುತ್ತಿತ್ತು. ಆದರೆ, ಈ ನಿಗೂಢ ಪ್ರಕರಣ ಬಗೆಹರಿಯುವ ಲಕ್ಷಣ ಕಾಣದ್ದರಿಂದ ಕೇಂದ್ರ ಸರ್ಕಾರ ಸಿಬಿಐಗೆ ತನಿಖೆಯ ಜವಾಬ್ದಾರಿ ವಹಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ