ಭಾನುವಾರ ಇಲ್ಲಿನ ಪುನರ್ವಸತಿ ಕೇಂದ್ರವೊಂದರಲ್ಲಿ ಒಬ್ಬರ ಸಾವಿಗೆ ಕಾರಣವಾದ ಸ್ಫೋಟಕ್ಕೆ ಸಂಬಂಧಿಸಿದಂತೆ ಮಾವೋವಾದಿಗಳ ಸಂಪರ್ಕ ಹೊಂದಿರುವ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಪುನರ್ವಸತಿ ಕೇಂದ್ರದಲ್ಲಿ ದೊರೆತಿರುವ ನಾಲ್ಕು ಬಂದೂಕುಗಳು ಅನೇಕ ಸಂಶಯಗಳಿಗೆ ಕಾರಣವಾಗಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಇನ್ನೂ ಗುರುತಿಸಲಾಗಿಲ್ಲ.
ಗಾಯಗೊಂಡ ಪ್ಯಾಟರ್ಸನ್ ಮಲ್ಲಿಕ್ ಜಿ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಬಟ್ಟಿಕೊಲ ಗ್ರಾಮಕ್ಕೆ ಸೇರಿದವರು. ನಂದಗಿರಿಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿದ್ದ ಪ್ಯಾಟರ್ಸನ್ ಮಲ್ಲಿಕ್ ಅವರ ಟೆಂಟ್‌ನಲ್ಲಿ ಸ್ಫೋಟ ಸಂಭವಿಸಿತ್ತು. ಆದರೆ ಮಲ್ಲಿಕ್ ಮೃತಪಟ್ಟ ವ್ಯಕ್ತಿಯ ಬಗ್ಗೆ ತನಗೇನು ತಿಳಿದಿಲ್ಲ ಎಂದಿದ್ದಾರೆ.
ಮೃತ ವ್ಯಕ್ತಿ ಬಟ್ಟಿಕೊಲ ಗ್ರಾಮದವನಲ್ಲ. ಕೇವಲ ಐದು ದಿನಗಳ ಹಿಂದಷ್ಟೇ ಪುನರ್ವಸತಿ ಕೇಂದ್ರಕ್ಕೆ ಬಂದಿದ್ದನೆಂದು ಕಂದಮಾಲ್‌ನ ಪೊಲೀಸ್ ವರಿಷ್ಠ ಪ್ರವೀಣ್ ಕುಮಾರ್ ಸ್ಫೋಟದ ಹಿಂದೆ ಮಾವೋವಾದಿಗಳ ಕೈವಾಡವಿರುವುದನ್ನು ನಾವು ಅಲ್ಲಗಳೆಯುವುದಿಲ್ಲ. ಆದರೆ ಮೃತ ವ್ಯಕ್ತಿ ಪುನರ್ವಸತಿ ಕೇಂದ್ರದ ನಿವಾಸಿಯಲ್ಲ ಎಂದರು. ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಸ್ಫೋಟಕಗಳು ಸ್ವರೂಪದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.