ಅಡ್ವಾಣಿ ರಾಜಕೀಯ ನಿವೃತ್ತಿ ಇಂಗಿತ: ನಿವೃತ್ತಿ ಬೇಡ ಪೇಜಾವರಶ್ರೀ
ನವದೆಹಲಿ, ಸೋಮವಾರ, 28 ಸೆಪ್ಟೆಂಬರ್ 2009( 17:53 IST )
PTI
ಬಿಜೆಪಿಯಲ್ಲಿ ಒಳಗೊಳಗೆ ಕುದಿಯುತ್ತಿದ್ದ ಭಿನ್ನಮತ ಬಹಿರಂಗವಾಗಿ ಸ್ಫೋಟಗೊಳ್ಳುತ್ತಿರುವ ತನ್ಮಧ್ಯೆಯೇ ಇದೀಗ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ರಾಜಕೀಯದಿಂದ ನಿವೃತ್ತಿ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸೋಮವಾರ ನವದೆಹಲಿಯಲ್ಲಿ ಪೇಜಾವರಶ್ರೀ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಡ್ವಾಣಿ ಅವರು ತಮ್ಮ ರಾಜಕೀಯ ನಿವೃತ್ತಿ ಕುರಿತು ಇಚ್ಛೆ ವ್ಯಕ್ತಪಡಿಸಿದ್ದಾರೆ. ಆದರೆ ಅಡ್ವಾಣಿ ಈಗಾಗಲೇ ರಾಜಕೀಯದಿಂದ ನಿವೃತ್ತಿ ಹೊಂದಬಾರದೆಂದು ತಾನು ಸಲಹೆ ನೀಡಿರುವುದಾಗಿ ಪೇಜಾವರಶ್ರೀ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ದೀರ್ಘಕಾಲದ ರಾಜಕೀಯ ಅನುಭವ ಹೊಂದಿರುವ ನೀವು ದಿಢೀರನೆ ರಾಜಕೀಯ ಸನ್ಯಾಸ ತೆಗೊಳ್ಳುತ್ತೇನೆ ಎಂಬ ನಿರ್ಧಾರಕ್ಕೆ ಬರಬಾರದು ಎಂದು ಪೇಜಾವಶ್ರೀ ಈ ಸಂದರ್ಭದಲ್ಲಿ ಅಡ್ವಾಣಿಗೆ ಸಲಹೆ ನೀಡಿದರು.
ಬಿಜೆಪಿಯಲ್ಲಿನ ಭಿನ್ನಮತ ಹಾಗೂ ಅಡ್ವಾಣಿ ವಿರುದ್ಧದ ಅಸಮಾಧಾನ ಹೆಚ್ಚುತ್ತಿರುವಂತೆಯೇ ರಾಜಕೀಯದಿಂದ ನಿವೃತ್ತಿ ಇಂಗಿತವನ್ನು ವ್ಯಕ್ತಪಡಿಸಿದ್ದು, ಬಹುತೇಕ ಡಿಸೆಂಬರ್ ಅಂತ್ಯದೊಳಗೆ ಅಡ್ವಾಣಿ ಅವರು ರಾಜಕೀಯದಿಂದ ನಿವೃತ್ತಿ ಹೊಂದುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿದೆ.