ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್ ಮುಖಂಡ ಮಹತೋ ವಿರುದ್ಧ ಹಲವು ಪ್ರಕರಣ ದಾಖಲು (Naxal | Mahato | Karnataka | Orissa | UPA)
 
ಬುಡಕಟ್ಟು ಹಾಗೂ ನಕ್ಸಲ್ ಮುಖಂಡ ಛತ್ರಧರ್ ಮಹತೋ ವಿರುದ್ಧ ಕಾನೂನು ವಿರೋಧಿ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅ.1ರವರೆಗೆ ಛತ್ರಧರ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಭಯೋತ್ಪಾದಕ ಸಂಘಟನೆಗೆ ಫಂಡ್‌ಗಳ ನೀಡಿಕೆ, ಪೊಲೀಸ್ ಸಿಬ್ಬಂದಿಯ ಹತ್ಯೆಗೆ ಯತ್ನ ಮತ್ತು ಆಡಳಿತ ಯಂತ್ರದ ವಿರುದ್ಧ ಪಿತೂರಿ ಮುಂತಾದ ಕೃತ್ಯಗಳಿಗಾಗಿ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆ(ಯುಎಪಿಎ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ಮಿಡ್ನಾಪುರರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಎನ್.ಎಸ್.ನಿಗಮ್ ಹೇಳಿಕೆ ನೀಡಿದ್ದಾರೆ.

ದರೋಡೆ, ಆಡಳಿತದ ವಿರುದ್ಧ ಸಮರ, ರಾಮಗಢ್ ಪೊಲೀಸ್ ಔಟ್ ಪೋಸ್ಟ್‌ನ ಧ್ವಂಸ, ಕೊಲೆಯತ್ನ ಮೊದಲಾದ ಕೃತ್ಯಗಳಿಗಾಗಿ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಮಹತೋ ವಿರುದ್ಧ ಆರೋಪಗಳನ್ನು ದಾಖಲಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ