ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕ್ವಟ್ರೋಚಿ ವಿರುದ್ಧ ಎಲ್ಲಾ ಪ್ರಕರಣ ವಾಪಾಸ್: ಸಿಬಿಐ (CBI | Quattrocchi | Bofors | Supreme Court)
 
ಬೋಫೋರ್ಸ್ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ವಿರುದ್ಧವಿರುವ ಎಲ್ಲಾ ಪ್ರಕರಣಗಳನ್ನು ಹಿಂತೆಗೆಯಲು ಸಿಬಿಐ ಮಂಗಳವಾರ ನಿರ್ಧರಿಸಿದೆ.

ಕ್ವಟ್ರೋಚಿ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಮುಚ್ಚಲು ಬಯಸಿರುವುದಾಗಿ ಸಿಬಿಐ ಹೇಳಿದೆ. ಅಲ್ಲದೆ, ಎಲ್ಲಾ ಸನ್ನಿವೇಶಗಳನ್ನು ಪರಿಗಣಿಸಿರುವ ಬಳಿಕ ಕೇಂದ್ರವು ಕ್ವಟ್ರೋಚಿ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಹಿಂತೆಗೆಯುವುದಾಗಿ ಸುಪ್ರೀಂಕೋರ್ಟಿಗೆ ತಿಳಿಸಿರುವ ಬಳಿಕ ಸಿಬಿಐಯ ಈ ನಿರ್ಧಾರ ಹೊರಬಿದ್ದಿದೆ.

ಕ್ವಟ್ರೋಚಿ ವಿರುದ್ಧ ಅಪರಾಧ ಸಾಬೀತು ಮಾಡುವಲ್ಲಿ ಸಿಬಿಐ ವಿಫಲವಾಗಿದೆ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ಕ್ವಟ್ರೋಚಿ ವಿರುದ್ಧ ಯಾವುದೇ ಪ್ರಕರಣವಿಲ್ಲ ಎಂಬುದಾಗಿ ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ ಎಂಬುದಾಗಿ ಸಾಲಿಸಿಟರ್ ಜನರಲ್ ಗೋಪಾಲ ಸುಬ್ರಮಣಿಯಮ್ ಅವರು ಸುಪ್ರೀಂ ಕೋರ್ಟಿಗೆ ತಿಳಿಸಿದರು.

ಡಿಸೆಂಬರ್ 11ರಂದು ಸುಪ್ರೀಂ ಕೋರ್ಟ್ ಪ್ರಕರಣದ ಮುಂದಿನ ವಿಚಾರಣೆ ನಡೆಸಲಿದೆ.
ಸಂಬಂಧಿತ ಮಾಹಿತಿ ಹುಡುಕಿ