ಇಂಟಕ್(ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್)ನ ಅಧ್ಯಕ್ಷರಾಗಿ ಜಿ. ಸಂಜೀವ ರೆಡ್ಡಿ ಅವರು ಮರು ಆಯ್ಕೆಯಾಗಿದ್ದು ಮುಂದಿನ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಸೋಮವಾರ ಅಂತ್ಯಗೊಂಡ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಆಯ್ಕೆ ನಡೆದಿದೆ.
ರೆಡ್ಡಿ ಅವರು ಸತತ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂಬುದಾಗಿ ಕೇರಳ ಘಟಕದ ಅಧ್ಯಕ್ಷ ಆರ್. ಚಂದ್ರಶೇಖರನ್ ಸುದ್ದಿರಾರರಿಗೆ ತಿಳಿಸಿದ್ದಾರೆ.
ಸರ್ಕಾರವು ಕಾರ್ಮಿಕ ವಲಯದ ನಿಗಮವನ್ನು ರೂಪಿಸಿ ಇದು ರೋಗಗ್ರಸ್ತ ವಲಯದ ಔದ್ಯಮಿಕ ಘಟಕಗಳನ್ನು ಪಡೆದುಕೊಂಡು ಇಲ್ಲಿನ ದೊಡ್ಡ ಸಂಖ್ಯೆಯ ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಬೇಕು ಎಂಬುದಾಗಿ ಇಂಟಕ್ ತನ್ನ ಮಸೂದೆಯೊಂದರಲ್ಲಿ ಸರ್ಕಾರವನ್ನು ಒತ್ತಾಯಿಸಿದೆ.