ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರರಿಗೆ ಸಹಾಯ ನಿಲ್ಲಿಸಿ: ಪಾಕ್‌ಗೆ ಚಿದು ಎಚ್ಚರಿಕೆ (Chidambaram | infiltration | J&K | Centre)
Feedback Print Bookmark and Share
 
ಉಗ್ರರಿಗೆ ಸಹಾಯ ಮಾಡುವುದನ್ನು ಮತ್ತು ಗಡಿಯಾಚೆಗಿನ ಅಕ್ರಮ ನುಸುಳುವಿಕೆಯನ್ನು ನಿಲ್ಲಿಸಿ ಎಂಬುದಾಗಿ ಗೃಹ ಸಚಿವ ಪಿ. ಚಿದಂಬರಂ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ಶ್ರೀನಗರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಭಯೋತ್ಪಾದನೆ, ಕಾನೂನು ಮತ್ತು ಸುವ್ಯವಸ್ಥೆ, ಮಾತುಕತೆಯ ಅವಶ್ಯಕತೆ, ರಾಜಕೀಯ ಗೊಂದಲಗಳು ಮತ್ತು ಜಮ್ಮು ಕಾಶ್ಮೀರದ ಸಾಮಾಜಿಕ ಅಭಿವೃದ್ಧಿ, ಸೇರಿದಂತೆ, ಹತ್ತು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು. ಕಾಶ್ಮೀರವನ್ನು ಅತ್ಯಂತ ಮೌಲ್ಯಯುತ ರಾಜ್ಯ ಎಂದವರು ಈ ಸಂದರ್ಭದಲ್ಲಿ ಬಣ್ಣಿಸಿದರು.

ಪಾಕಿಸ್ತಾನ ಪ್ರಾಯೋಜಿತ ಉಗ್ರವಾದವನ್ನು ಕಟುವಾಗಿ ಖಂಡಿಸಿದ ಅವರು ಯಾವುದೇ ರಾಜಕೀಯ ಕಾರಣಗಳಿದ್ದರೂ ಜಮ್ಮು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಆಸ್ಪದವಿಲ್ಲ ಎಂದು ಹೇಳಿದ್ದಾರೆ. ಸಮಾಜದ ಪ್ರತಿ ವರ್ಗದೊಂದಿಗೂ ಮಾತುಕತೆ ನಡೆಸುವ ಕುರಿತು ಕೇಂದ್ರವು ಸಂಪೂರ್ಣ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಪಕ್ಷಪಾತಿತನದ ಹಾಗೂ ಖಚಿತವಲ್ಲದ ಸುದ್ದಿಯನ್ನು ವರದಿಮಾಡದಿರಿ ಎಂಬುದಾಗಿ ಮಾಧ್ಯಮಗಳಿಗೂ ಎಚ್ಚರಿಕೆ ನೀಡಿದ ಅವರು, ಜಮ್ಮು ಕಾಶ್ಮೀರದ ಪರಿಸ್ಥಿತಿ ಇತ್ತೀಚಿನ ತಿಂಗಳುಗಳಲ್ಲಿ ಸುಧಾರಿಸಿದೆ ಮತ್ತು ಪಾಕಿಸ್ತಾನ ಬೆಂಬಲಿತ ಉಗ್ರವಾದವೂ ತೀಕ್ಷ್ಣವಾಗಿ ಕುಂಠಿತಗೊಂಡಿದೆ ಎಂದು ಅವರು ಹೇಳಿದರು.

"ನಮಗೆ ಜಮ್ಮು ಕಾಶ್ಮೀರದ ಜನರೊಂದಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಪ್ರಮುಖ ಸಮಸ್ಯೆ ಎದುರಾಗುವುದು ಅಕ್ರಮ ನುಸುಳುವಿಕೆಯಿಂದ. ಇದನ್ನು ಪಾಕ್ ಆಕ್ರಮಿತ ಪಾಕಿಸ್ತಾನದಿಂದ ಮಾಡಲಾಗುತ್ತಿದೆ. ಅಲ್ಲಿನ ಅಧಿಕಾರಿಗಳು ಯುವಕರಿಗೆ ತರಬೇತಿ ನೀಡಿ, ಅವರ ಮನಪರಿವರ್ತನೆ ಮಾಡಿ ಅವರನ್ನು ಭಾರತದೊಳಕ್ಕೆ ನುಸುಳಿ ಗಂಡಾಂತರಕಾರಿ ಕಾರ್ಯವನ್ನು ಎಸಗಲು ಸಹಾಯ ಮಾಡುತ್ತಾರೆ" ಎಂದು ಚಿದಂಬರಂ ನುಡಿದರು.

ಕಳೆದ ಎರಡ್ಮೂರು ತಿಂಗಳಿಂದ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮ ನುಸುಳುವಿಕೆ ಹೆಚ್ಚಿದೆ ಎಂದು ಅವರು ಈ ಸಂದರ್ಭದಲ್ಲಿ ಒಪ್ಪಿಕೊಂಡರು.
ಸಂಬಂಧಿತ ಮಾಹಿತಿ ಹುಡುಕಿ