ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಗಿ ಭದ್ರತೆ ನಡುವೆ‌ಯ‌ೂ ನಕ್ಸಲರ ಕರಿನೆರಳು (Gadchiroli | Naxal | Etapalli | Maoists)
Feedback Print Bookmark and Share
 
ನಕ್ಸಲ್ ಪೀಡಿತ ಗಢಚಿರೋಲಿ ಜಿಲ್ಲೆಯಲ್ಲಿ ಮತದಾನಕ್ಕೆ ಭಾರೀ ಭದ್ರತೆ ಒದಗಿಸಿದ್ದರೂ ಕೂಡ ಮಾವೋವಾದಿ ನಕ್ಸಲರು ಮತದಾನದ ಮೇಲೆ ತಮ್ಮ ಕರಾಳಹಸ್ತ ಚಾಚಿದರು. ಜಿಲ್ಲೆಯ 350 ಕಿಮೀ ಉದ್ದಕ್ಕೂ ಚಾಚಿರುವ ವಿವಿಧ ಸ್ಥಳಗಳಲ್ಲಿ 8 ಮತಗಟ್ಟೆಗಳ ಮೇಲೆ ದಾಳಿ ಮಾಡುವಲ್ಲಿ ನಕ್ಸಲರು ಯಶಸ್ವಿಯಾದರು. ಮುಂಜಾನೆ 5.30ಕ್ಕೆ ಎಟಾಪಲ್ಲಿ ತೆಹಸೀಲ್ ಮತಗಟ್ಟೆಯ ಮೇಲೆ ನಕ್ಸಲರು ಪ್ರಥಮ ದಾಳಿ ಮಾಡಿದ್ದರು.

839 ಮತಗಟ್ಟೆಗಳಲ್ಲಿ ನಕ್ಸಲರ ಹಾವಳಿಯಿಂದ ಅಧಿಕಾರಿಗಳು ಸುಮಾರು 22 ಮತಗಟ್ಟೆಗಳಿಗೆ ತಲುಪಲು ಸಾಧ್ಯವಾಗದೇ ಮತದಾನವೇ ಸ್ಥಗಿತಗೊಂಡಿದ್ದರಿಂದ ಗುರುವಾರ ಮರುಮತದಾನ ನಡೆಯಲಿದೆ. ಸುಮಾರು 10,000 ಪೊಲೀಸರು ಮತ್ತು ಅರೆಮಿಲಿಟರಿ ಪಡೆಗಳು ಜತೆಗೆ ನಾಲ್ಕು ಹೆಲಿಕಾಪ್ಟರುಗಳನ್ನು ಮತದಾನದ ಭದ್ರತೆಗೆ ನಿಯೋಜಿಸಲಾಗಿತ್ತು. ಪ್ರತಿ 10 ಕಿಮೀ ಸುತ್ತಳತೆಯಲ್ಲಿ ಮಾವೋವಾದಿಗಳ ಚಲನವಲನಗಳ ಮೇಲೆ ನಿಗಾ ವಹಿಸಲಾಗಿತ್ತು.

ಕಾರ್ಚಿ ತೆಹಸೀಲ್‌ನ ಬೊಂಡಾಯ್ ಮತಗಟ್ಟೆಯಲ್ಲಿ ಮಾವೋವಾದಿಗಳ ಮುತ್ತಿಗೆಯನ್ನು 30 ನಿಮಿಷಗಳ ಗುಂಡಿನ ಚಕಮಕಿ ಬಳಿಕ ಹಿಮ್ಮೆಟ್ಟಿಸಲಾಯಿತು. ಕಮ್ಟಾಲಾದಲ್ಲಿ ಗುಂಡಿನ ಚಕಮಕಿ ಸುಮಾರು 2 ಗಂಟೆಗಳ ಕಾಲ ಸಾಗಿತು.

ಕಾರ್ಚಿ ಜಿಲ್ಲೆಯಲ್ಲಿ ಪೊಲೀಸರು ಮತದಾರರನ್ನು ಬಂದೂಕಿನಿಂದ ಬೆದರಿಸಿ ಬಲವಂತವಾಗಿ ಮತಗಟ್ಟೆಗಳಿಗೆ ಸಾಗಿಸುತ್ತಿದ್ದು, ನಕ್ಸಲ್ ದಾಳಿ ನಡೆದರೆ ಅವರನ್ನು ಮಾನವ ರಕ್ಷಾಕವಚದಂತೆ ಬಳಸಲಾಗುತ್ತದೆಂದು ಆರೋಪದ ಮೇಲೆ ಕಾರ್ಚಿ ಜಿಲ್ಲೆಯ ಮಸೇಲಿಯಲ್ಲಿ ಪೊಲೀಸ್ ಮತ್ತು ಸ್ಥಳೀಯ ಪತ್ರಕರ್ತರ ತಂಡದ ನಡುವೆ ತೀವ್ರ ಚಕಮಕಿ ನಡೆಯಿತು.
ಸಂಬಂಧಿತ ಮಾಹಿತಿ ಹುಡುಕಿ