ಅಕ್ಟೋಬರ್ 22ರಂದು ವಿದ್ಯುನ್ಮಾನ ಮತಯಂತ್ರಗಳು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಮಾತ್ರ ಹೊರಗೆಡಹುವುದಿಲ್ಲ. ಜತೆಗೆ ವಿಚಾರವಾದಿಗಳು ಮತ್ತು ಜ್ಯೋತಿಷಿಗಳ ನಡುವಿನ ಕುತೂಹಲಕಾರಿ ಸ್ಫರ್ಧೆಯ ಫಲಿತಾಂಶವನ್ನೂ ನೀಡಲಿದೆ.
ಜ್ಯೋತಿಷ್ಯವನ್ನು ಮೋಸ ಎಂದು ಹೇಳುವ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯು ಚುನಾವಣಾ ಫಲಿತಾಂಶದ ಕುರಿತು ಭವಿಷ್ಯ ನೀಡಲು ಜ್ಯೋತಿಷಿಗಳಿಗೆ ಆಹ್ವಾನ ನೀಡಿದೆ. ನಿಖರ ಭವಿಷ್ಯನುಡಿದು ಯಾರಾದರು ಗೆದ್ದರೆ ಅವರಿಗೆ 21 ಲಕ್ಷ ರೂಪಾಯಿ ಇನಾಮು ಘೋಷಿಸಿದೆ.
ಇದರಲ್ಲಿ ಭಾಗವಹಿಸುವ ಜ್ಯೋತಿಷಿಗಳು ತಮ್ಮ ಆಯ್ಕೆಯ ಹತ್ತು ಅಭ್ಯರ್ಥಿಗಳ ಜಾತಕವನ್ನು ಪಡೆದು, ಪ್ರತೀ ಅಭ್ಯರ್ಥಿಗಳು ಪಡೆಯುವ ಮತಗಳು ಎಷ್ಟು ಹಾಗೂ ಅವರ ಗೆಲವಿನ ಅಂತರವೆಷ್ಟು ಎಂಬುದಾಗಿ ಜ್ಯೋತಿಷ್ಯ ನುಡಿಯಲು ಸೂಚಿಸಲಾಗಿದೆ. ಇದೇ ವೇಳೆ ಅವರುಗಳು ಅಸ್ಸೆಂಬ್ಲಿಯಲ್ಲಿ ಪಕ್ಷವಹಿ ಸ್ಥಾನಗಳ ಕುರಿತು ಊಹಿಸಲೂ ಹೇಳಲಾಗಿದೆ.
ಈ ಹಿಂದೆ ನಮ್ಮ ಗಡುವುರೇಖೆ ಅಕ್ಟೋಬರ್ 12 ಆಗಿತ್ತು. ಆದರೆ ನಾವೀಗ ಇದನ್ನು ಅಕ್ಟೋಬರ್ 21ಕ್ಕೆ ವಿಸ್ತರಿಸಿದ್ದೇವೆ ಎಂಬುದಾಗಿ ಸಮಿತಿಯ ಮುಖಂಡ ಡಾ| ನರೇಂದ್ರ ದಾಭೋಕರ್ ಹೇಳಿದ್ದಾರೆ.
ಅವರು ನುಡಿಯುವ ಭವಿಷ್ಯ ಶೇ.80ರಷ್ಟು ಸರಿಯಾಗಿದ್ದರೂ ಸಾಕು. ಆದರೆ ಜ್ಯೋತಿಷಿಯು ತಾವು ನುಡಿಯುವ ಭವಿಷ್ಯದ ಹಿಂದಿರುವ ವೈಜ್ಞಾನಿಕ ಕಾರಣವನ್ನೂ ಸಹ ವಿವರಿಸಬೇಕಿದೆ ಎಂದು ದಾಬೋಕರ್ ಹೇಳಿದ್ದಾರೆ.
ಈ ಸಂಘಟನೆಯು ಇಂತಹ ಸ್ಫರ್ಧೆಯನ್ನು ಇದೇ ಪ್ರಥಮ ಬಾರಿಯಾಗಿ ಆಯೋಜಿಸಿದೆ. ಇದು ಈ ಹಿಂದೆ ಹಲವು ಬಾರಿ ಜ್ಯೋತಿಷಿಗಳಿಗೆ ತಮ್ಮ ವೃತ್ತಿಯ ವಿಶ್ವಾಸಾರ್ಹತೆಯನ್ನು ಸಾಬೀತು ಮಾಡುವಂತೆ ಸವಾಲೊಡ್ಡಿತ್ತು.
ಜ್ಯೋತಿಷ್ಯಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇಲ್ಲ ಎಂಬುದನ್ನು ಸಾಬೀತು ಮಾಡಲು ಇಚ್ಚಿಸಿದ್ದೇವೆ ಎಂಬುದಾಗಿ ಸಂಸ್ಥೆ ಹೇಳಿದೆ. ಈ ವರ್ಷವನ್ನು ಅಂತಾರಾಷ್ಟ್ರೀಯ ಖಗೋಳವಿಜ್ಞಾನ ವರ್ಷವಾಗಿ ಆಚರಿಸಲಾಗುತ್ತಿದ್ದು, ಕೆಲವು ಜನರು ಜ್ಯೋತಿಷ್ಯವನ್ನು ಖಗೋಳವಿಜ್ಞಾನಕ್ಕೆ ಹೋಲಿಸುತ್ತಿದ್ದಾರೆ.
ರಾಜ್ಯಾದ್ಯಂತ ಇದುವರೆಗೆ 40 ಪ್ರವೇಶಗಳನ್ನು ಪಡೆದಿರುವುದಾಗಿ ಹೇಳಿರುವ ದಾಬೋಕರ್, ನಮ್ಮಸಂಸ್ಥೆಯ ಬ್ಯಾಂಕ್ ಖಾತೆಯಲ್ಲಿ ಇದೀಗಾಗಲೇ 21 ಲಕ್ಷ ರೂಪಾಯಿ ಜಮೆಯಾಗಿದೆ. ಆದರೆ ಎಲ್ಲ ಜ್ಯೋತಿಷರು ಸೋತಿದ್ದಾರೆ ಎಂಬುದಾಗಿ ಅಕ್ಟೋಬರ್ 22ರಂದು ಘೋಷಿಸುವುದು ಖಂಡಿತ ಎಂಬ ವಿಶ್ವಾಸ ಅವರದ್ದು.
ಜ್ಯೋತಿಷ್ಯವು ಮಾರಣಾಂತಿಕತೆಯನ್ನು ಉತ್ತೇಜಿಸುವ ಕಾರಣ ಅದು ವಿಶ್ವಾಸಾರ್ಹವಲ್ಲ ಎಂಬುದನ್ನು ಸಾಬೀತು ಪಡಿಸಲು ನಾವು ಇಚ್ಚಿಸುತ್ತೇವೆ ಎಂದು ಅವರು ಹೇಳಿದ್ದಾರೆ.