ಭಾರತದ ಕೆಲವು ಇಲಾಖೆಗಳು ಹಾಗೂ ಸಚಿವಾಲಯಗಳು ಅಮೆರಿಕದ ಕಂಪನಿಗಳಿಂದ ಭಾರಿ ಲಂಚ ಪಡೆದಿವೆ ಎಂಬುದಾಗಿ ದೂರಲಾಗಿದ್ದು, ಈ ಕುರಿತು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿರುವ ಮೀರಾ ಶಂಕರ್ ಅವರು ಪತ್ರ ಬರೆದಿದ್ದಾರೆ.
ಅಮೆರಿಕದಲ್ಲಿ ಭಾರತೀಯ ಅಮೆರಿಕ ಭ್ರಷ್ಟಾಚಾರ ಕಾಯ್ದೆಯನ್ವಯ ಪ್ರಕಾರ ಅಲ್ಲಿನ ಕಂಪೆನಿಗಳು ವಿದೇಶಗಳಲ್ಲಿ ಮಾಡಿರುವ ಕಾನೂನು ಬಾಹಿರ ಪಾವತಿಗಳ ಕುರಿತು ಮಾಹಿತಿ ನೀಡಬೇಕಿದೆ. ಅದರಂತೆ ಭಾರತದಲ್ಲಿ ಮಾಡಿರುವ ಪಾವತಿಗಳ ವಿವರ ಇಂತಿದೆ.
2009ರ ಜನವರಿ 9ರಂದು ಮಾರಿಯೋ ಸಿವಿನೋ ಎಂಬ ಕಂಪೆನಿಯು ಮಾಹಾರಾಷ್ಟ್ರದ ವಿದ್ಯುತ್ ನಿಗಮಕ್ಕೆ ಕಾನೂನು ಬಾಹಿರವಾಗಿ 10 ಲಕ್ಷ ಡಾಲರ್ ನೀಡಿರುವುದಾಗಿ ಹೇಳಿದೆ.
ಫೆಬ್ರವರಿ 14ರಂದು ವೆಸ್ಟಿಂಗ್ ಹೌಸ್ ಏರ್ ಬ್ರೇಕ್ ಟೆಕ್ನಾಲಜೀಸ್ ಸಿಬ್ಬಂದಿಗಳು ಭಾರತೀಯ ರೈಲ್ವೇ ಇಲಾಖೆಗೆ 1,37,400 ಡಾಲರ್ ನೀಡಿದೆ.
2007ರ ಅಕ್ಟೋಬರ್ 1ರಂದು ಯಾರ್ಕ್ ಇಂಟರ್‌ನ್ಯಾಶನಲ್ ಕಾರ್ಪೋರೇಶನ್ ಮಧ್ಯವರ್ತಿಗಳ ಮೂಲಕ ಭಾರತೀಯ ನೌಕಾ ಅಧಿಕಾರಿಗಳಿಗೆ 1,32,500 ಡಾಲರ್ ನೀಡಿರುವುದಾಗಿ ಹೇಳಿದೆ.
ಕೇಂದ್ರೀಯ ಕೀಟನಾಶಕ ಮಂಡಳಿಯಪ ತ್ವರಿತ ನೋಂದಣಿಗಾಗಿ ಅಮೆರಿಕ ಕಂಪೆನಿಯಿಂದ ಲಂಚ ಸ್ವೀಕರಿಸಿರುವುದಾಗಿ ತಿಳಿಸಿದೆ.
ಈ ಎಲ್ಲ ಹೇಳಿಕೆಗಳು ಯುಪಿಎ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಈ ವಿಚಾರವನ್ನು ಪರಿಗಣಿಸುವುದಾಗಿ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದರು.
ಈ ಕುರಿತು ಇದೀಗಾಗಲೇ ತನಿಖೆಗೆ ಆದೇಶ ನೀಡಲಾಗಿದ್ದು, ಸಿಬಿಐ ತನಿಖೆ ಆರಂಭಿಸಿದೆ.