ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೈಎಸ್‌ಆರ್ ಪ್ರತಿಮೆ: ಪೈಪೋಟಿಗೆ ಬಿದ್ದ ನಿಷ್ಠರು (Congress | Hyderabad | Reddy | Statues)
Feedback Print Bookmark and Share
 
ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ ನಿಧನದಿಂದ ಆಘಾತಗೊಂಡಿದ್ದ ಅವರ ನಿಷ್ಠರು ಸದಾ ತಮ್ಮ ಪ್ರೀತಿಪಾತ್ರ ನಾಯಕನ ನೆನಪಿಗಾಗಿ ಅವರ ಪ್ರತಿಮೆಗಳನ್ನು ಸ್ಥಾಪಿಸಲು ಪರಸ್ಪರ ಪೈಪೋಟಿ ನಡೆಸಿದ್ದಾರೆ.

ಗ್ರೇಟರ್ ಹೈದರಾಬಾದ್‌ನಲ್ಲಿ ಕನಿಷ್ಠ 30 ವೈಎಸ್‌ಆರ್ ಪ್ರತಿಮೆಗಳು ಅನಾವರಣಗೊಳ್ಳುವ ನಿರೀಕ್ಷೆಯಿರುವುದಾಗಿ ಆಂಧ್ರಪ್ರದೇಶ ಆರೋಗ್ಯ ಸಚಿವ ಮತ್ತು ಗ್ರೇಟರ್ ಹೈದರಾಬಾದ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದನಂ ನಾಗೇಂದರ್ ತಿಳಿಸಿದ್ದಾರೆ. ಪ್ರತಿಮೆಗಳ ಸ್ಥಾಪನೆಗೆ ಅನುಮತಿ ಪಡೆಯಬೇಕಿದ್ದರೂ ರೆಡ್ಡಿ ನಿಷ್ಠರು ನಾ ಮುಂದು, ತಾ ಮುಂದು ಎಂದು ಪೈಪೋಟಿಗೆ ಬಿದ್ದಿದ್ದಾರೆ.

ಪ್ರತಿ ವರ್ಷ ಪ್ರತಿಮೆಗಳ ನಿರ್ವಹಣೆಗೆ ಕೂಡ ಸಾವಿರಾರು ರೂಪಾಯಿ ಅಗತ್ಯವಿದ್ದು, ವೈಎಸ್‌ಆರ್ ಮೊದಲ ಪ್ರತಿಮೆ ಕಳೆದ ವಾರ ಅನಾವರಣಗೊಂಡಿದ್ದು, ಇನ್ನೂ ಎರಡು ವೈಎಸ್‌ಆರ್ ಮ‌ೂರ್ತಿಗಳು ಅ.17ರಂದು ಅನಾವರಣವಾಗಲಿದೆ. ಆದರೆ ಇದಾವ ಪ್ರತಿಮೆಗಳೂ ಅಧಿಕೃತ ಸಮಿತಿಯ ಅನುಮತಿ ಪಡೆದಿಲ್ಲವೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ