ಮಹಿಳೆ ವಿರುದ್ಧ ಕ್ರೌರ್ಯ ಕಾಯ್ದೆ ದುರ್ಬಳಕೆ: ಕೋರ್ಟ್ ಕಳವಳ
ನವದೆಹಲಿ, ಗುರುವಾರ, 15 ಅಕ್ಟೋಬರ್ 2009( 16:26 IST )
ಮಹಿಳೆಯರ ವಿರುದ್ಧ ಕ್ರೌರ್ಯ ಕಾಯ್ದೆಯ ದರ್ಬಳಕೆಯ ವಿರುದ್ಧ ಕಳವಳ ವ್ಯಕ್ತಪಡಿಸಿರುವ ದೆಹಲಿ ನ್ಯಾಯಾಲಯ ಒಂದು, ಇಂತಹ ಪ್ರಕರಣಗಳಲ್ಲಿ ಆರೋಪಿತ ಪತಿಯ ಸಂಬಂಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮುನ್ನ ಜಾಗರೂಕವಾಗಿರಬೇಕು ಎಂಬುದಾಗಿ ವಿಚಾರಣಾ ನ್ಯಾಯಾಲಯಗಳಿಗೆ ಸೂಚನೆ ನೀಡಿದೆ.
"ಪತಿ ಮನೆಯವರನ್ನು ಐಪಿಸಿ ಸೆಕ್ಷನ್ 498ಎ (ಮಹಿಳೆಯರ ವಿರುದ್ಧ ಕ್ರೌರ್ಯ) ಅಡಿಯಲ್ಲಿ ತರುವ ಪ್ರವೃತ್ತಿ ಹೆಚ್ಚುತ್ತಿದೆ. ದೋಷಾರೋಪಣೆ ಮಾಡುವ ಮುನ್ನ ಘಟನೆ ನಡೆದ ದಿನಾಂಕ, ಸ್ಥಳ, ರೀತಿ, ಕ್ರೌರ್ಯದ ಕ್ರಿಯೆ ಮುಂತಾದವುಗಳನ್ನೊಳಗೊಂಡ ರಚನಾತ್ಮಕ ಆರೋಪಗಳು ಸಾಕ್ಷ್ಯದಲ್ಲಿ ಇರಬೇಕು" ಎಂದು ಹೆಚ್ಚುವರಿ ಸತ್ರ ನ್ಯಾಯಾಧೀಖ ಎಸ್.ಕೆ. ಸರ್ವರಿಯ ಹೇಳಿದ್ದಾರೆ.
ದೂರು ನೀಡಿರುವ ಮಹಿಳೆಯು ಕ್ರೌರ್ಯದ ನಿರ್ದಿಷ್ಟ ಘಚನೆಯನ್ನು ಬೆಟ್ಟು ಮಾಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಿಮೋಚನೆ ಮಾಡಿರುವ ಪ್ರಕರಣದ ವಿರುದ್ಧ ಕಿರಣ್ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿರುವ ನ್ಯಾಯಾಧೀಶರು ಈ ತೀರ್ಪು ನೀಡಿದ್ದಾರೆ.