ಗೋವಾದ ಮಾರ್ಗೋವಾ ಪಟ್ಟಣದಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಪಟ್ಟಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮಾಲೆಗಾಂವ್ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ ಜತೆ ಜತೆ ನಂಟು ಹೊಂದಿರುವ ಬಲಪಂಥೀಯ ಹಿಂದು ಸಂಘಟನೆಯ ಒಬ್ಬ ಸದಸ್ಯ ಈ ಘಟನೆಯಲ್ಲಿ ಸತ್ತಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದ.
ಗಾಯಗೊಂಡಿದ್ದ ಎರಡನೇ ವ್ಯಕ್ತಿ ಕೂಡ ಶನಿವಾರ ಅಸುನೀಗಿದ್ದು, ಸತ್ತವರ ಸಂಖ್ಯೆ 2ಕ್ಕೇರಿದೆ. ಕಳೆದ ರಾತ್ರಿ 9.30ಕ್ಕೆ ಈ ಸ್ಫೋಟ ಸಂಭವಿಸಿದ್ದು, ಸ್ಪೋಟಕಗಳನ್ನು ಸ್ಕೂಟರ್‌ನಲ್ಲಿ ಇರಿಸಲಾಗಿದ್ದು, ಜನನಿಬಿಡ ಬೀದಿಯಲ್ಲಿ ಸ್ಪೋಟಿಸಿತೆಂದು ವರದಿಯಾಗಿದೆ.
ಪೊಲೀಸರು ಬಲಪಂಥೀಯ ಸಂಘಟನೆ ಸನಾತನ ಸೌನ್‌ಸ್ತಾ ಜತೆ ನಂಟಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆಂದು ಗೋವಾ ಗೃಹಸಚಿವ ರವಿ ನಾಯಕ್ ತಿಳಿಸಿದ್ದಾರೆ. ಸ್ಛೋಟಕಗಳನ್ನು ಸಾಗಿಸುತ್ತಿದ್ದ ಸ್ಕೂಟರ್ ಸೌನ್‌ಸ್ತಾ ಅನುಯಾಯಿ ನಿಶಾದ್ ಬಾಕ್ಲೆಗೆ ಸೇರಿತ್ತೆಂದು ಅವರು ಹೇಳಿದ್ದಾರೆ.
ಸ್ಫೋಟದಲ್ಲಿ ಮೆಲಗುಂಡಾ ಪಾಟೀಲ್ ಎಂಬ ವ್ಯಕ್ತಿ ಮೃತಪಟ್ಟಿದ್ದು, ಯೋಗೇಶ್ ನಾಯಕ್ ಎಂದು ಗುರುತಿಸಲಾದ ಇನ್ನೊಬ್ಬ ವ್ಯಕ್ತಿಗೆ ಗೋವಾ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಶನಿವಾರ ಮೃತಪಟ್ಟಿದ್ದಾನೆ. ಪ್ರಜ್ಞಾಸಿಂಗ್ ಅವರ ಜತೆ ಸಂಪರ್ಕ ಹೊಂದಿರುವ ಸೌನ್‌ಸ್ತಾಗೆ ಇಬ್ಬರೂ ಸೇರಿದ್ದಾರೆಂದು ಪೊಲೀಸರು ಹೇಳಿದ್ದಾರೆ.