ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಡಂಗಾವ್ ಸ್ಫೋಟ; ಹಿಂದೂ ಸಂಘಟನೆಯ ಐವರ ಸೆರೆ (Goa | Hindu | Margao | Sanatan Sanstha)
Feedback Print Bookmark and Share
 
ಮಡಂಗಾವ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ತನಿಖೆ ತೀವ್ರಗೊಳಿಸಿದ್ದು ಬಲಪಂಥೀಯ ಹಿಂದೂ ಸಂಘಟನೆಗೆ ಸೇರಿದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸ್ಫೋಟದಲ್ಲಿ ಹಿಂದೂ ಸಂಘಟನೆ 'ಸನಾತನ ಸಂಸ್ಥೆ'ಯ ಕೈವಾಡವಿರುವ ಪ್ರಬಲ ಸಾಕ್ಷ್ಯಗಳು ಲಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ನಡೆದ ಈ ಸ್ಫೋಟದಲ್ಲಿ ಗಾಯಗೊಂಡಿದ್ದ ಮಾಲಗೊಂಡಾ ಪಾಟೀಲ್ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಾಳು ಯೋಗೇಶ್ ನಾಯಕ್ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಅವನಿಗೆ ಗೋವಾ ಮೆಡಿಕಲ್ ಕಾಲೇಜ್‌‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಿಂದೂ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯ ಬಂಧಿತ ಸದಸ್ಯರ ವಿರುದ್ಧ ಐಪಿಸಿ 121, 122, 123 ಹಾಗೂ ಸೆಕ್ಷನ್ ಐದು ಮತ್ತು ಆರರ ಸ್ಫೋಟಕ ಕಾಯ್ದೆ ಪ್ರಕಾರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಡಿಐಜಿ ಆರ್.ಎಸ್. ಯಾದವ್ ತಿಳಿಸಿದ್ದಾರೆ.

ನಾಲ್ಕು ಬಾಂಬ್‌ಗಳನ್ನು ಬಚ್ಚಿಡಲಾಗಿತ್ತು. ಅದರಲ್ಲಿ ಒಂದು ಸಾಗಿಸುವ ಹಂತದಲ್ಲಿ ಸ್ಫೋಟಗೊಂಡಿದ್ದರೆ, ಮತ್ತೆರಡನ್ನು ಮಡಂಗಾವ್ ಸಮೀಪ ಹಾಗೂ ಮತ್ತೊಂದನ್ನು ಸಂಕೋಲೆಯ ಶಾಂತದುರ್ಗ ದೇವಸ್ಥಾನದ ಸಮೀಪ ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲಾಗಿದೆ.

ಸ್ಫೋಟಕ ಹೊಂದಿದ್ದ ಸ್ಕೂಟರನ್ನು ಪೂರ್ವ ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ಮಾಡಲು ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಇದರಲ್ಲಿದ್ದ ಇಬ್ಬರು ತೀವ್ರ ಗಾಯಗೊಂಡಿದ್ದರು. ಅವರಲ್ಲೊಬ್ಬ ಸಾವನ್ನಪ್ಪಿದ್ದಾನೆ. ಹೆಚ್ಚಿನ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಯಾದವ್ ವಿವರಣೆ ನೀಡಿದ್ದಾರೆ.

ಯೋಗೀಶ್ ನಾಯ್ಕನ ಸಹೋದರ ಸುರೇಶ್, ಪುಣೆಯ ಸಂದೀಪ್ ಶಿಂಧೆ, ಆಶ್ರಮದ ವ್ಯವಸ್ಥಾಪಕ ವೀರೇಂದ್ರ ಮರಾಠೆ ಸೇರಿದಂತೆ ಸನಾತನ ಸಂಸ್ಥೆಯ ಐವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದೆ ಎನ್ನಲಾದ ಸನಾತನ ಸಂಸ್ಥೆಯು ಮಾಲೆಂಗಾವ್ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಜತೆ ನಿಕಟ ಸಂಪರ್ಕ ಹೊಂದಿತ್ತು ಎಂದೂ ಮೂಲಗಳು ತಿಳಿಸಿವೆ.

ಪೊಲೀಸರು ಇದೀಗ ಸನಾತನ ಸಂಸ್ಥೆಗೆ ಸೇರಿದ ಕಚೇರಿಗಳಿಗೆ ದಾಳಿ ಆರಂಭಿಸಿದ್ದು, ಪೋಂಡಾದಲ್ಲಿನ ರಾಮನಾಥಿಯ ಆಶ್ರಮದಲ್ಲಿ ಶನಿವಾರ ಪೂರಕ ಸಾಕ್ಷ್ಯಗಳು ಲಭ್ಯವಾಗಿವೆ. ಶನಿವಾರ ಬೆಳಿಗ್ಗೆ ಒಂಬತ್ತರಿಂದ ಮಧ್ಯಾಹ್ನ 2.30ರವರೆಗೆ ದಾಳಿಗಳನ್ನು ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿನ 30 ಕೊಠಡಿಗಳನ್ನು ತಪಾಸಣೆ ನಡೆಸಿದ್ದೇವೆ. ಈ ಸಂದರ್ಭದಲ್ಲಿ ವಾಚ್ ಸೇರಿದಂತೆ ಇತರ ಹಲವು ಇಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿವೆ. ಇಲ್ಲಿ ಕೆಲವು ವಿದೇಶಿಗರೂ ಸೇರಿದಂತೆ 167 ಮಂದಿ ತಂಗಿದ್ದರು. ಆಶ್ರಮದಲ್ಲಿ ತಂಗಿದ್ದವರಲ್ಲಿ ಅಗತ್ಯ ದಾಖಲೆಗಳಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅದೇ ಹೊತ್ತಿಗೆ ಮಹಾರಾಷ್ಟ್ರ ಪೊಲೀಸರು ಸನಾತನ ಸಂಸ್ಥೆಯ ಸಾಂಗ್ಲಿ ಮತ್ತು ಮಿರಾಜ್ ಕಚೇರಿಗಳಿಗೆ ದಾಳಿ ನಡೆಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ