ಮಾರ್ಗಾಂವ್ ಸ್ಫೋಟ ಪ್ರಕರಣದಲ್ಲಿ ತಮ್ಮ ಕೈವಾಡವಿದೆ ಎಂದು ಬಿಂಬಿಸುತ್ತಿರುವುದು ಮತ್ತು ಸ್ಫೋಟದ ಬಗ್ಗೆ ದೂರು ನೀಡಿರುವ ನಮ್ಮನ್ನೇ ಆರೋಪಿಗಳಾಗಿ ಹೆಸರಿಸಿರುವುದು ಸಂಘಟನೆಯ ವಿರುದ್ಧದ ಒಳಸಂಚು ಎಂದು ಬಲಪಂಥೀಯ ಹಿಂದೂ ಸಂಘಟನೆ ಸನಾತನ ಸಂಸ್ಥೆ ಸ್ಪಷ್ಟಪಡಿಸಿದೆ.
"(ಸ್ಫೋಟದಲ್ಲಿ ಮೃತಪಟ್ಟಿರುವ ಆರೋಪಿಗಳಲ್ಲೊಬ್ಬನಾಗಿರುವ) ಮಲಗೊಂಡಾ ಪಾಟೀಲ್ ಸ್ಕೂಟರಿನಲ್ಲಿ ಯಾರೋ ಬಾಂಬ್ ಇರಿಸಿರುವ ಎಲ್ಲ ಸಾಧ್ಯತೆಗಳೂ ಇವೆ. ಪೊಲೀಸರು ಈ ಸ್ಫೋಟ ಪ್ರಕರಣದಲ್ಲಿ ಅನವಶ್ಯವಾಗಿ ಸನಾತನ ಸಂಸ್ಥೆ ಹೆಸರು ಸೇರಿಸುತ್ತಿದ್ದಾರೆ" ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.
"ನಾವು ಆರೋಪಿಗಳಲ್ಲ, ಬದಲಾಗಿ ನಾವೇ ದೂರುದಾರರು. ನಮ್ಮ ಸದಸ್ಯರಲ್ಲೊಬ್ಬ ಸಾವನ್ನಪ್ಪಿರುವುದರಿಂದ ರಾಜ್ಯ ಸರಕಾರವು ನಮಗೆ ನ್ಯಾಯ ಒದಗಿಸಬೇಕು" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸ್ಫೋಟದಲ್ಲಿ ಆರೋಪಿಯೆಂದು ಗುರುತಿಸಲ್ಪಟ್ಟಿರುವ ಮಲಗೊಂಡಾ ಪಾಟೀಲ್, ದೀಪಾವಳಿ ಮುನ್ನಾದಿನ ಮಾರ್ಗಾವ್‌ನಲ್ಲಿ ನಡೆದ ಸ್ಫೋಟದಲ್ಲಿ ಮೃತಪಟ್ಟಿದ್ದ. "ನಮ್ಮ ಅನುಯಾಯಿಗಳಲ್ಲೊಬ್ಬರನ್ನು ಸಮಾಜವಿರೋಧಿ ಶಕ್ತಿಗಳು ಹತ್ಯೆಗೈದಿದ್ದು, ಇದು ಸಂಪೂರ್ಣವಾಗಿ ನಮ್ಮ ವಿರುದ್ಧದ ಒಳಂಚು" ಎಂದು ಪ್ರಕಟಣೆಯಲ್ಲಿ ದೂರಲಾಗಿದೆ.