ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐಐಟಿ ಸೇರೋದಿನ್ನು ಅಂದ್ಕೊಂಡಷ್ಟು ಸುಲಭವಲ್ಲ..! (IIT | IIT-JEE | 12 class | Kapil Sibal)
Feedback Print Bookmark and Share
 
12ನೇ ತರಗತಿಗೆ ಹೆಚ್ಚಿನ ಮಹತ್ವ ಕೊಡಲು ನಿರ್ಧರಿಸಿರುವ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್, ಶೇ.80ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಐಐಟಿ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.

ಪ್ರಸಕ್ತ ಶೇ.60ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಐಐಟಿ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ. ಇದರಿಂದಾಗಿ 12ನೇ ತರಗತಿಯ ಅಧ್ಯಯನದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಒಲವು ತೋರಿಸುತ್ತಿಲ್ಲ ಎಂಬುದನ್ನು ಮನಗಂಡಿರುವ ಸರಕಾರ, ಐಐಟಿ ಪ್ರವೇಶ ಪರೀಕ್ಷೆ ಬರೆಯಲು 12ನೇ ತರಗತಿಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕ ಪಡೆಯಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರಲು ಯೋಚನೆ ನಡೆಸುತ್ತಿದೆ.

ಈ ಸಂಬಂಧ ಸೋಮವಾರ ಐಐಟಿ ನಿರ್ದೇಶಕರನ್ನೊಳಗೊಂಡ ಸಮಿತಿಯೊಂದನ್ನು ಕೇಂದ್ರ ಸರಕಾರ ರಚಿಸಿದ್ದು, ಇದು 2011ರ ಐಐಟಿ ಪ್ರವೇಶಕ್ಕಾಗಿ ಪರಿಷ್ಕೃತ ವ್ಯವಸ್ಥೆಯನ್ನು ರೂಪಿಸಲಿದೆ.

ವಿದ್ಯಾರ್ಥಿಗಳು 12ನೇ ತರಗತಿಯನ್ನು ಗಂಭೀರವಾಗಿ ಪರಿಗಣಿಸುವ ಮತ್ತು ಐಐಟಿ ಪ್ರವೇಶ ಪರೀಕ್ಷೆಗಾಗಿನ ತರಬೇತಿ ಕೇಂದ್ರಗಳಲ್ಲಿನ ವೃದ್ಧಿಯನ್ನು ತಡೆಗಟ್ಟುವ ನಿಟ್ಟಿನಿಂದ ಸರಕಾರ ಈ ಕ್ರಮಕ್ಕೆ ಮುಂದಾಗಿದೆ ಎಂದು ಸಿಬಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರಸಕ್ತ ನಿಯಮಾವಳಿಗಳ ಪ್ರಕಾರ ಐಐಟಿ-ಜೀ(IIT-JEE)ಗೆ ಹಾಜರಾಗಲು ವಿದ್ಯಾರ್ಥಿಗಳು ಶೇ.60ರಷ್ಟು ಅಂಕಗಳನ್ನು 12ನೇ ತರಗತಿಯಲ್ಲಿ ಪಡೆಯುವುದು ಕಡ್ಡಾಯ. ಇದು ನ್ಯಾಯಸಮ್ಮತವಲ್ಲ ಎಂದಿರುವ ಸಚಿವರು, ಐಐಟಿ-ಜೀಗೆ ಹಾಜರಾಗಲು ಪ್ರಸಕ್ತ ನಿಗದಿಪಡಿಸಲಾಗಿರುವ ಅಂಕಗಳನ್ನು ಶೇ.80ರಿಂದ 85ರಷ್ಟು ಏರಿಸಲಾಗುತ್ತದೆ ಎಂದು ಐಐಟಿ ಸಭೆಯ ನಂತರ ಅವರು ತಿಳಿಸಿದ್ದಾರೆ.

ಆದರೆ ಕನಿಷ್ಠ ಅಂಕಗಳನ್ನು ಎಷ್ಟರ ಪ್ರಮಾಣಕ್ಕೆ ನಿಗದಿಪಡಿಸಬೇಕೆಂಬುದನ್ನು ನಿಯೋಜಿತ ಸಮಿತಿಯೇ ನಿರ್ಧರಿಸಲಿದೆ ಎಂದು ಸಿಬಲ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ