ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾಳೆ ಮೂರು ರಾಜ್ಯಗಳ ಚುನಾವಣಾ ಫಲಿತಾಂಶ (Maharashtra | Haryana | Arunachal Pradesh | Election)
Feedback Print Bookmark and Share
 
ಮಹಾರಾಷ್ಟ್ರ, ಹರ್ಯಾಣ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ನಾಳೆ ನಡೆಯಲಿದ್ದು, ಕಳೆದ ಹಲವು ದಿನಗಳಿಂದ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಫಲಿತಾಂಶ ಪ್ರಕಟವಾಗಲಿದೆ.

ಲೋಕಸಭಾ ಚುನಾವಣೆ ನಂತರ ಅತಿ ಹೆಚ್ಚು ಗಮನ ಸೆಳೆದಿದ್ದ ಈ ಮೂರು ರಾಜ್ಯಗಳಲ್ಲಿ ಅಕ್ಟೋಬರ್ 13ರಂದು ಚುನಾವಣೆಗಳು ನಡೆದಿದ್ದವು.

ಚುನಾವಣಾ ಆಯೋಗದ ಉಸ್ತುವಾರಿಯಲ್ಲಿ ಗುರುವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಮಾಡಲಾಗಿದೆ.

ಮತ ಎಣಿಕೆಯು ತ್ವರಿತ ಗತಿಯಲ್ಲಿ ನಡೆಯಲಿದ್ದು, ಪ್ರತೀ ಸುತ್ತುಗಳ ಫಲಿತಾಂಶವನ್ನು ತಕ್ಷಣವೇ ಕಪ್ಪು ಹಲಗೆ ಮೇಲೆ ಎಣಿಕೆ ಕೇಂದ್ರದಲ್ಲಿ ಬರೆಯಲಾಗುತ್ತದೆ ಮತ್ತು ಹೊರಗಡೆ ಪ್ರಕಟಿಸಲಾಗುತ್ತದೆ ಎಂದು ಮೂರು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಒಂದು ಸುತ್ತಿನ ಫಲಿತಾಂಶವನ್ನು ಪ್ರಕಟಿಸಿದ ನಂತರವಷ್ಟೇ ನಂತರದ ಸುತ್ತಿನ ಮತ ಎಣಿಕೆ ಕಾರ್ಯವನ್ನು ಆರಂಭಿಸಲಾಗುತ್ತದೆ ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ರಾಜ್ಯಗಳ ಫಲಿತಾಂಶಗಳಲ್ಲಿ ಹೆಚ್ಚು ಗಮನ ಸೆಳೆದಿರುವುದು ಮಹಾರಾಷ್ಟ್ರ. ಇಲ್ಲಿ ಹಲವರು ಮುಖ್ಯಮಂತ್ರಿ ಗಾದಿಯತ್ತ ಕಣ್ಣಿಟ್ಟಿರುವುದು ಈಗಾಗಲೇ ಕಂಡು ಬಂದಿದೆ.

ಆಡಳಿತಾರೂಢ ಕಾಂಗ್ರೆಸ್-ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)ಗಳು ಹ್ಯಾಟ್ರಿಕ್ ಕನಸಿನಲ್ಲಿದ್ದರೆ, ಶಿವಸೇನೆ ಮತ್ತು ಅದರ ಬಂಡಾಯ ಗುಂಪು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕೂಡ ಫಲಿತಾಂಶದಲ್ಲಿ ಬಹು ನಿರೀಕ್ಷೆಯನ್ನಿಟ್ಟುಕೊಂಡಿವೆ.

ಅಲ್ಲದೆ ಇಲ್ಲಿ 1,820 ಸ್ವತಂತ್ರ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ತಮ್ಮ ಪಕ್ಷಗಳಲ್ಲಿ ಟಿಕೆಟ್ ಸಿಗದೆ ಅಥವಾ ಇನ್ನಿತರ ಕಾರಣಗಳಿಂದಾಗಿ ಬಂಡಾಯ ಎದ್ದವರು. ಹಾಗಾಗಿ ಇಲ್ಲಿ ಪ್ರತಿಷ್ಠೆಯ ಮೇಲಾಟ ನಡೆದಿದ್ದು, ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

ಅತ್ತ ಹರ್ಯಾಣದಲ್ಲಿ ಅಭಿವೃದ್ಧಿ ಮಂತ್ರವನ್ನು ಪಠಿಸುತ್ತಿರುವ ಕಾಂಗ್ರೆಸ್ ಸತತ ಎರಡನೇ ಬಾರಿ ಅಧಿಕಾರದ ಗದ್ದುಗೆಯನ್ನೇರುವ ಕನಸಿನಲ್ಲಿದೆ.

ಇಲ್ಲಿನ ವಿರೋಧ ಪಕ್ಷವೀಗ ಒಡೆದ ಮನೆಯಾಗಿದ್ದು, ಓಂ ಪ್ರಕಾಶ್ ಚೌಟಾಲರ ಐಎನ್‌ಎಲ್‌ಡಿ ಜತೆಗಿನ ಸಂಬಂಧವನ್ನು ಬಿಜೆಪಿ ಮುರಿದುಕೊಂಡಿದೆ. ಅತ್ತ ಬಿಎಸ್‌ಪಿ ಹರ್ಯಾಣ ಜನಹಿತ್ ಕಾಂಗ್ರೆಸ್ ಜತೆಗಿನ ಸಂಬಂಧವನ್ನೂ ಕಡಿದುಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ