ಕಳೆದ ಮೂರು ದಶಕಗಳ ಅವಧಿಯಲ್ಲಿ ಮುಂಬೈ ಅಪರಾಧ ನಿಗ್ರಹ ದಳದ ಗುಂಡಿಗೆ ಬಲಿಯಾದವರಲ್ಲಿ ಭೂಗತ ದೊರೆ ಛೋಟಾ ರಾಜನ್ ಬಂಟರಿಗಿಂತ ಆತನ ಬದ್ಧವೈರಿ ದಾವೂದ್ ಇಬ್ರಾಹಿಂ ಬಂಟರೇ ಹೆಚ್ಚು.
ಕಳೆದ 29 ವರ್ಷಗಳ ಅವಧಿಯಲ್ಲಿ ದಾವೂದ್ ಗ್ಯಾಂಗ್‌ನ 167 ಮಂದಿಯನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಬಲಿ ಪಡೆದುಕೊಂಡಿದ್ದರೆ, ಛೋಟಾ ರಾಜನ್ ಕಡೆಯ 144 ಜನರನ್ನು ಕೊಂದು ಹಾಕಲಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡಿರುವ ಈ ವರದಿ ಪ್ರಕಾರ ಭಾರತದ ವಾಣಿಜ್ಯ ರಾಜಧಾನಿಯಲ್ಲಿ 37 ಭಿನ್ನ ಗ್ಯಾಂಗ್‌ಗಳು ಕಾರ್ಯಾಚರಿಸಿದ್ದವು ಎಂದು ತಿಳಿಸಲಾಗಿದೆ.
ದಾವೂದ್ ಇಬ್ರಾಹಿಂ, ಛೋರಾ ರಾಜನ್, ಸ್ವತಂತ್ರ, ಅರುಣ್ ಗಾವ್ಳಿ, ಗುರು ಸಾಟಂ, ಅಬು ಸಲೇಂ, ಅಮರ್ ನಾಯಕ್, ಛೋಟಾ ಶಕೀಲ್, ರಾಬರ್, ಅಶ್ವಿನ್ ನಾಯರ್, ಅಮರ್ ನಾಯಕ್, ಡಿ.ಕೆ. ರಾವ್, ಖಂಡಾನಿಕೋರ್ ಮತ್ತು ಧನಂಜಯ್ ಶೆಟ್ಟಿ ನೇತೃತ್ವದ ಗುಂಪಿಗೆ ಸೇರಿದ ಹಲವು ಸದಸ್ಯರನ್ನು ಇದುವರೆಗೆ ಕೊಂದು ಹಾಕಲಾಗಿದೆ.
ಇಂತಹ ಗ್ಯಾಂಗ್‌ಗಳಿಗೆ ಸೇರಿದವರನ್ನು ಎನ್‌ಕೌಂಟರ್ ಮಾಡುವ ಮೂಲಕ ಕೊಂದು ಹಾಕುವ ಪ್ರಕ್ರಿಯೆ ಆರಂಭವಾಗಿದ್ದು 1980ರ ಆರಂಭದಲ್ಲಿ ಎಂದೂ ದಾಖಲೆ ವಿವರಣೆ ನೀಡಿದೆ. 1990ರ ವರೆಗೆ ಪ್ರತೀ ವರ್ಷ ಒಂದರಿಂದ ಐದಕ್ಕೆ ಸೀಮಿತವಾಗಿರುತ್ತಿದ್ದ ಎನ್‌ಕೌಂಡರ್ ಸಾವು, ನಂತರದ ದಿನಗಳಲ್ಲಿ ಭಾರೀ ಏರಿಕೆ ಕಂಡಿತು.
ಇದರ ಪ್ರಕಾರ ಕಳೆದ 29 ವರ್ಷಗಳ ಅವಧಿಯಲ್ಲಿ 1,000ಕ್ಕೂ ಹೆಚ್ಚು ಗ್ಯಾಂಗ್‌ಸ್ಟರ್‌ಗಳು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.