ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಬ್ಳಿ, ಯುವಿ ತಂದೆ, ರಾಷ್ಟ್ರಪತಿ ಪುತ್ರ ಏನಾದ್ರು? (Assembly Elections 2009 | Maharashtra | Arunachal Pradesh | Haryana | Election Result)
Feedback Print Bookmark and Share
 
ಮಹಾರಾಷ್ಟ್ರ, ಹರ್ಯಾಣ ಮತ್ತು ಅರುಣಾಚಲ ಪ್ರದೇಶಗಳಲ್ಲಿ ನಡೆದ ಅಸೆಂಬ್ಲಿ ಚುನಾವಣೆಗಳ ಫಲಿತಾಂಶಗಳು ಗುರುವಾರ ಹೊರಬಿದ್ದಿದ್ದು, ಮೂರೂ ರಾಜ್ಯಗಳಲ್ಲಿ ಅಧಿಕಾರಾರೂಢ ಕಾಂಗ್ರೆಸ್ ಪಕ್ಷವು ಅಧಿಕಾರ ಉಳಿಸಿಕೊಂಡಿದೆ. ಈ ಚುನಾವಣೆ ಫಲಿತಾಂಶದ ಕೆಲವು ಮುಖ್ಯಾಂಶಗಳು:

* ವಿಧಾನಸಭೆ ಪ್ರತಿಪಕ್ಷ ನಾಯಕ, ಶಿವಸೇನೆಯ ರಾಮದಾಸ್ ಕದಮ್‌ಗೆ ಗುಹಾಗರ್ ಕ್ಷೇತ್ರದಲ್ಲಿ ಸೋಲು

* ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚವಾಣ್ ಭೋಕಾರ್ ಕ್ಷೇತ್ರದಿಂದ ವಿಜಯ

* ಸ್ಫೋಟದಿಂದ ವಿವಾದಕ್ಕೀಡಾಗಿದ್ದ ಮಾಲೆಗಾಂವ್‌ನಲ್ಲಿ ಜನ ಸುರಾಜ್ಯ ಪಾರ್ಟಿ ಮೂಲಕ ಸ್ಪರ್ಧಿಸಿದ್ದ ಮುಸ್ಲಿಂ ಮತ ಪಂಡಿತ ಮೌಲಾನಾ ಮುಫ್ತಿ ಇಸ್ಮಾಯಿಲ್ ವಿಜಯ

* ಪ್ರತಿಪಕ್ಷಗಳ ಮತ ವಿಭಜನೆಯಿಂದ ಕಾಂಗ್ರೆಸಿಗೆ ಲಾಭ: ಬಿಜೆಪಿ ಹೇಳಿಕೆ

* ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಪುತ್ರಿ ಪ್ರಣೀತಿಗೆ ಸೋಲಾಪುರ ಕ್ಷೇತ್ರದಲ್ಲಿ ವಿಜಯ

* ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದಾಗಿ ನಮಗೆ ಸೋಲು: ಬಿಜೆಪಿ

* ಎಂಎನ್ಎಸ್ ನಮಗೆ ಬಲವಾದ ಹೊಡೆತ ನೀಡಿದೆ: ಎನ್‌ಸಿಪಿ

* ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆಗೆ ಕುದಾಲ್ ಕ್ಷೇತ್ರದಲ್ಲಿ ಜಯ

* ಅಮರಾವತಿ ಕ್ಷೇತ್ರದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪುತ್ರ ರಾವ್ ಸಾಹೇಬ್ ಶೇಖಾವತ್‌ಗೆ ಪ್ರಯಾಸದ ಗೆಲುವು. ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ದೇಶಮುಖ್ ಸೋಲು

* ಕ್ರಿಕೆಟಿಗ ವಿನೋದ್ ಕಾಂಬ್ಳಿ (ಲೋಕಭಾರತಿ ಪಕ್ಷ) ರಾಜಕೀಯದಲ್ಲಿ ಔಟ್, ವಿಕ್ರೋಲಿಯಲ್ಲಿ ಸೋಲು, ಎಂಎನ್ಎಸ್‌ನ ಮಂಗೇಶ್ ಸಾಂಗ್ಲೆ ಗೆಲುವು

* ಪ್ರಮೋದ್ ಮಹಾಜನ್ ಪುತ್ರಿ ಪೂನಂ ಮಹಾಜನ್‌ಗೆ ಘಾಟ್ಕೊಪರ್ ಪಶ್ಚಿಮ ಕ್ಷೇತ್ರದಲ್ಲಿ ಎಂಎನ್ಎಸ್‌ನ ರಾಮ್ ಕದಮ್ ಎದುರು ಸೋಲು.

* ಎನ್‌ಸಿಪಿ ನಾಯಕ ಛಗನ್ ಭುಜಬಲ್ ಪುತ್ರಿ ಪಂಕಜಾ ಭುಜಬಲ್ ಗೆಲುವು

* ಮಹಾರಾಷ್ಟ್ರದಲ್ಲಿ ಐವರು ಕನ್ನಡಿಗರು ವಿಜಸಾಧಿಸಿದ್ದಾರೆ. ಅವರೆಂದರೆ: ಕೃಷ್ಣ ಹೆಗಡೆ (ವಿಲೇಪಾರ್ಲೆ ಕ್ಷೇತ್ರ, ಕಾಂಗ್ರೆಸ್), ಸುರೇಶ್ ಶೆಟ್ಟಿ (ಅಂಧೇರಿ ಪೂರ್ವ, ಕಾಂಗ್ರೆಸ್), ಗೋಪಾಲ ಶೆಟ್ಟಿ (ಬೋರಿವಿಲಿ ಕ್ಷೇತ್ರ, ಬಿಜೆಪಿ), ಜಗನ್ನಾಥ ಶೆಟ್ಟಿ (ಸಯನ್ ಕೋಳಿವಾಡ ಕ್ಷೇತ್ರ, ಕಾಂಗ್ರೆಸ್ ) ಮತ್ತು ಗಿಲ್ಬರ್ಟ್ ಮೆಂಡೋನ್ಸಾ (ಮೀರಾ ಭಯಂದರ್ ಕ್ಷೇತ್ರ, ಎನ್‌ಸಿಪಿ).

* ಸರಕಾರ ಕೋರಿದಲ್ಲಿ ಬೆಂಬಲ ನೀಡಲು ಸಿದ್ಧ: ಎಂಎನ್ಎಸ್ ಪ್ರತಿಕ್ರಿಯೆ

* ಹರ್ಯಾಣದ ಪಂಚಕುಳದಲ್ಲಿ ಐಎನ್ಎಲ್‌ಡಿಯಿಂದ ಸ್ಪರ್ಧಿಸಿದ್ದ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್‌ಗೆ ಸೋಲು

* ಹರ್ಯಾಣದಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗಳಿಸಿದ್ದರೂ ಅಧಿಕಾರ ಉಳಿಸಿಕೊಂಡಿದೆಯಾದರೂ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಫೂಲ್‌ಚಂದ್ ಮುಲ್ಲಾನಾ ಅವರು ಅಂಬಾಲ ಕ್ಷೇತ್ರದಲ್ಲಿ ಐಎನ್ಎಲ್‌ಡಿ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.

* ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಜಯಭೇರಿ

* ಹರ್ಯಾಣದಲ್ಲಿ ಹ್ಯಾಟ್ರಿಕ್ ಬಾರಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್

ಮಹಾರಾಷ್ಟ್ರ, ಹರಿಯಾಣ, ಅರುಣಾಚಲ ಪ್ರದೇಶಗಳಲ್ಲಿ ಕಾಂಗ್ರೆಸ್ ಸರಕಾರ: ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಸಂಬಂಧಿತ ಮಾಹಿತಿ ಹುಡುಕಿ