ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತಿತರ ನಾಯಕರನ್ನು ಹತ್ಯೆ ಮಾಡುವುದಾಗಿ ಇಸ್ಲಾಮಿಕ್ ಭಯೋತ್ಪಾದಕ ಗುಂಪಾದ ಲಷ್ಕರೆ ತೊಯ್ಬಾ(ಎಲ್‌ಇಟಿ) ಝಾನ್ಸಿ ರೈಲ್ವೆ ಪೊಲೀಸರಿಗೆ ಪತ್ರ ಬರೆದು ಬೆದರಿಕೆ ಹಾಕಿದೆ.
ಝಾನ್ಸಿ ರೈಲ್ವೆ ಪೊಲೀಸ್ ಸೂಪರಿಂಟೆಂಡೆಂಟ್ ಅವರಿಗೆ ಈ ಪತ್ರ ತಲುಪಿದ ಬಳಿಕ, ಮುಖ್ಯಮಂತ್ರಿಗಳಿಗೆ ಬಿಗಿ ಭದ್ರತೆ ನಿಯೋಜಿಸಲಾಗಿದೆಯೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಪತ್ರದ ಸತ್ಯಾಸತ್ಯತೆ ಕುರಿತು ತಪಾಸಣೆ ನಡೆಸಲಾಗುತ್ತಿದೆಯೆಂದು ಅಧಿಕಾರಿ ಹೇಳಿದರು.
ಎಲ್‌ಇಟಿ ಬರೆದಿದ್ದೆಂದು ಹೇಳಲಾದ ಪತ್ರವನ್ನು ಝಾನ್ಸಿಯಲ್ಲಿ ಸ್ವೀಕರಿಸಿದ್ದನ್ನು ಪೊಲೀಸ್ ವಕ್ತಾರ ಪ್ರಕಾಶ್ ದೀಕ್ಷಿತ್ ದೃಢಪಡಿಸಿದ್ದಾರೆ. ಚೌಹಾನ್ ಅವರಿಗಲ್ಲದೇ ಇನ್ನೂ ಕೆಲವು ಹಿರಿಯ ನಾಯಕರಿಗೆ ಪತ್ರದ ಮೂಲಕ ಲಷ್ಕರೆ ತೊಯ್ಬಾ ಬೆದರಿಕೆ ಹಾಕಿದೆ.