ಮಂಗಳವಾರ ನಸುಕಿನ ವೇಳೆಗೆ ನಕ್ಸಲರು ಇಲ್ಲಿನ ಎರಡು ಶಾಲೆಗಳನ್ನು ಸ್ಫೋಟಿಸಿದ್ದಾರೆ. ಹರಿದಿಹ್ ಹಾಗೂ ಧಾರ್ಪಾಹರಿ ಶಾಲೆಗಳೊಳಗೆ ಸ್ಫೋಟಕಗಳನ್ನು ಇರಿಸುವ ಮೂಲಕ ಈ ದುಷ್ಕೃತ್ಯ ನಡೆಸಿದ್ದು, ಇದರಿಂದಾಗಿ ಶಾಲಾ ಕಟ್ಟಡಗಳಿಗೆ ಹಾನಿಯುಂಟಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಅದೃಷ್ಟವಶಾತ್ ಯಾವುದೇ ಜೀವ ಹಾನಿಯಾಗಿಲ್ಲ. ಯಾವುದೇ ನೆಲಬಾಂಬ್ ಸ್ಫೋಟಗಳನ್ನು ತಪ್ಪಿಸಲು ಪೊಲೀಸರು ಕಾಲ್ನಡಿಗೆ ಮೂಲಕ ಸ್ಥಳಕ್ಕೆ ತಲುಪಿದ್ದಾರೆ.
ಪೊಲೀಸರು ತಮ್ಮ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುವ ವೇಳೆ ತಂಗುವ ಶಾಲೆಗಳನ್ನು ನಕ್ಸಲರು ಸಾಮಾನ್ಯವಾಗಿ ಸ್ಫೋಟಿಸುತ್ತಾರೆ.