ಕಿರು ಮಾಹಿತಿ ಹಂಚಿಕೊಳ್ಳುವ ಆನ್‌ಲೈನ್ ತಾಣ ಟ್ವೀಟರ್‌ನಲ್ಲಿ ವಿಮಾನದ ಎಕಾನಮಿ ದರ್ಜೆಯನ್ನು ದನದ ದೊಡ್ಡಿ ಎಂದು ವರ್ಣಿಸಿ ತೀವ್ರ ವಿವಾದಕ್ಕೆ ಈಡಾಗಿದ್ದ ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿ ತರೂರ್, ಈಗ ಅದೇ ಟ್ವೀಟರ್ ಅನ್ನು ಎಡಪಕ್ಷಗಳ ಮೇಲೆ ದಾಳಿ ನಡೆಸಲು ಬಳಸಿಕೊಂಡಿದ್ದಾರೆ.
ಆರೋಗ್ಯ ವಿಷಯಗಳನ್ನೂ ರಾಜಕೀಯಗೊಳಿಸುತ್ತಿರುವ ಎಡಪಕ್ಷಗಳು, ಕೇರಳದ ಮಾನಸಿಕ ಆರೋಗ್ಯ ಕೇಂದ್ರಕ್ಕೆ ನಿಗದಿಯಾಗಿದ್ದ ಅನುದಾನವನ್ನು ಬೇರೆಡೆಗೆ ಬಳಸಿಕೊಳ್ಳಲು ಯತ್ನಿಸಿವೆ ಎಂದು ದೂರಿದ್ದಾರೆ.
ತಿರುವನಂತಪುರದ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಶ್ರೇಷ್ಠತಾ ಸ್ಥಾನಮಾನ ಹಾಗೂ ಅನುದಾನ ಒದಗಿಸುವ ತಮ್ಮ ಪ್ರಸ್ತಾಪವನ್ನು ಸ್ವೀಕರಿಸಿದ್ದಾಗಿ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಅವರಿಗೆ ವಂದನೆ ಸಲ್ಲಿಸಿದ್ದಾರೆ.