ಎಫ್‌ಬಿಐ ಬಂಧಕ್ಕೀಡಾಗಿ ಸ್ಫೋಟಕ ಮಾಹಿತಿಗಳನ್ನು ಹೊರಗೆಡಹಿರುವ ಶಂಕಿತ ಲಷ್ಕರೆ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲೀ 2006-09ರ ವೇಳೆ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಭಾರತದ ಐದು ನಗರಗಳಲ್ಲಿ ಸುತ್ತಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಕಳೆದ ತಿಂಗಳು ಚಿಕಾಗೋದಲ್ಲಿ ಎಫ್‌ಬಿಐ ಬಂಧನಕ್ಕೀಡಾಗಿರುವ ಹೆಡ್ಲಿ ಆಹ್ಮದಾಬಾದ್, ಲಕ್ನೋ, ಆಗ್ರ ಹಾಗೂ ದೆಹಲಿಗಳಿಗೆ ಭೇಟಿ ನೀಡಿದ್ದ ಎಂದು ಅಧಿಕೃತ ಮೂಲಗಳು ಹೇಳಿವೆ. ಅಮೆರಿಕ ಪ್ರಜೆಯಾಗಿರುವ ಹೆಡ್ಲಿ ಭಾರತದ ರಾಷ್ಟ್ರೀಯ ರಕ್ಷಣಾ ಕಾಲೇಜು ಹಾಗೂ ಇತರ ಪ್ರಮುಖ ನೆಲೆಗಳ ಮೇಲೆ ದಾಳಿಮಾಡಲು ಸಂಚು ಹೂಡಿದ್ದ ಎಂಬುದಾಗಿ ತನಿಖೆಯ ವೇಳೆ ಬಾಯ್ಬಿಟ್ಟಿದ್ದ. ಈತ ಅಮೆರಿಕದಲ್ಲೂ ದಾಳಿನಡೆಸಲು ಯೋಜಿಸಿದ್ದ ಎಂದು ಹೇಳಲಾಗಿದೆ.
ಈತ ಲಷ್ಕರೆ ಸೂಚನೆ ಮೇರೆಗೆ ಭಾರತದಲ್ಲಿ ಮುಂಬೈ ದಾಳಿಯಂತಹ ಭಾರೀದಾಳಿ ನಡೆಸಲು ಮುಂದಾಗಿದ್ದ ಎಂದು ತನಿಖೆಯ ವೇಳೆ ಹೇಳಿದ್ದ. ಇದಲ್ಲದೆ ಈತ ಲಷ್ಕರೆ ಸಂಘಟನೆಗಳಿಗೆ ನೇಮಕಾತಿಯನ್ನೂ ಮಾಡುತ್ತಿದ್ದ.