ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಂಡಮಾರುತಕ್ಕೆ ಯಾಕೆ ಸ್ತ್ರೀಯರದ್ದೇ ಹೆಸರು? (Cyclone | Phyan | Ward | Laila)
Feedback Print Bookmark and Share
 
ನವದೆಹಲಿ: ಫಿಯಾನ್ ಎಂಬ ಚಂಡಮಾರುತ ರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿ ಭೀತಿ ಹುಟ್ಟಿಸಿತ್ತು. ಆದರೆ ನಿರೀಕ್ಷಿತ ಹಾನಿ ಏನೂ ಮಾಡದೆ ಹಾದು ಹೋಯಿತು. ಅದೆಲ್ಲ ಸರಿ, ಈ ಚಂಡಮಾರುತಗಳಿಗೆ ಈ ಹೆಸರುಗಳನ್ನು ಇಡೋರು ಯಾರು?

ಫಿಯಾನ್ ಮತ್ತು ವಾರ್ಡ್ ಬಳಿಕ ಲೈಲಾವು ಐಲಾದ ಸ್ಥಾನ ಪಡೆಯಲಿದೆ. ಆದರೆ ಇದು ಯಾವಾಗ ಎಂಬುದು ಯಾರಿಗೂ ತಿಳಿದಿಲ್ಲ. ಇದು ಇನ್ನಷ್ಟೆ ಜನಿಸಬೇಕಿದೆ. ಲೈಲಾ ಎಂಬುದು ಚಂಡಮಾರುತದ ಹೆಸರುಗಳಲ್ಲಿ ಒಂದು. ಇದು ಐಲಾದ ಬಳಿಕದ ಎರಡು ಮಾರುತಗಳ ಬಳಿಕ ಅಪ್ಪಳಿಸಲಿದೆ.

ಚಂಡಮಾರುತಗಳನ್ನು ಗುರುತಿಸಲು ಮತ್ತು ಅವುಗಳ ಕುರಿತು ಎಚ್ಚರಿಕೆ ನೀಡಲು, ಅವುಗಳಿಗೆ ನಾಮಕರಣ ಮಾಡುವ ಪದ್ಧತಿ ಆರಂಭಗೊಂಡು ವರ್ಷಗಳು ಕಳೆದವು. 90ರ ದಶಕದ ಮಧ್ಯದ ತನಕ ಚಂಡಮಾರುತಗಳಿಗೆ ಯಾವುದೇ ಕಟ್ಟುಪಾಡುಗಳು ಇಲ್ಲದಂತೆ ಹೆಸರುಗಳನ್ನು ಇಡಲಾಗುತ್ತಿತ್ತು ಮತ್ತು ಇವುಗಳು ಸ್ತ್ರೀ ಹೆಸರುಗಳು.

ಬಳಿಕ ಹವಾಮಾನ ಇಲಾಖೆಯು ವರ್ಣಮಾಲೆಯ ಪ್ರಕಾರ ಹೆಸರುಗಳನ್ನು ಇರಿಸಲಾರಂಭಿಸಿತು. ಬಹುಶಃ ಶಿಸ್ತಿಗಾಗಿ ಇರಬಹುದು, ವರ್ಷದ ಮೊದಲ ಚಂಡಮಾರುತದ ಹೆಸರು ಇಂಗ್ಲೀಷ್ ಅಕ್ಷರದ 'ಎ'ಯಿಂದ ಆರಂಭಗೊಳ್ಳುತ್ತದೆ.

ವಿಶ್ವ ಹವಾಮಾನ ಸಂಘಟನೆ, ಏಷ್ಯಾದ ಆರ್ಥಿಕ ಮತ್ತು ಸಾಮಾಜಿಕ ಆಯೋಗ ಮತ್ತು ಏಶ್ಯಾ ಹಾಗೂ ಫೆಸಿಫಿಕ್ ಸಮಿತಿಯು ಚಂಡಮಾರುತಗಳಿಗೆ ಇರಿಸುವ ಹೆಸರುಗಳು ಉದ್ದ ಪಟ್ಟಿಯನ್ನು ತಯಾರಿಸಿವೆ.

2000ದಲ್ಲಿ ಮಸ್ಕತ್‌ನಲ್ಲಿ ನಡೆದ ಸಭೆಯಲ್ಲಿ ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದ ಮಾರುತಗಳಿಗೆ ಹೆಸರಿಡಲು ಒಪ್ಪಿತು. ಭಾರತದ ಉತ್ತರದ ಮೇಲಿನ ಭಾಗದ ಸಮುದ್ರಗಳ ಮಾರುತಗಳಿಗೆ ಹೆಸರಿಸಿರುವ ಪ್ರಕ್ರಿಯೆ 2004ರಿಂದ ಆರಂಭಗೊಂಡಿತು. ನಾಮಕರಣ ಸಮಿತಿಯಲ್ಲಿ ಇರುವ ರಾಷ್ಟ್ರಗಳ ಹೆಸರನ್ನು ಆ ರಾಷ್ಟ್ರಗಳು ಸೂಚಿಸುವ ಹೆಸರು ಬಳಸಲು ಅವಕಾಶವಾಗುವಂತೆ ಅನುಕ್ರಮಿಸಲಾಗಿದೆ.


ಮಾಲ್ಡೀವ್ಸ್ ಸೂಚಿಸಿದ ಡಾಲ್ಫಿನ್ ಎಂಬ ಅರ್ಥ ಬರುವ ಐಲಾ ಹೆಸರಿಗಿಂತ ಮುಂಚಿತವಾಗಿ ಭಾರತವು ಸೂಚಿಸಿದ ಬಿಜ್ಲಿ ಇತ್ತು. ಇದಕ್ಕೂ ಮುನ್ನ ಬಾಂಗ್ಲಾ ದೇಶ ಸೂಚಿಸಿದ್ದ ನಿಶಾ ಇತ್ತು.

ಐಲಾದ ಬಳಿಕ ಮ್ಯಾನ್ಮಾರ್ ಸೂಚಿಸಿರುವ ಫಿಯಾನ್. ಇದರ ಬಳಿಕ ಒಮನ್ ಸಲಹೆ ಮಾಡಿರುವ ವಾರ್ಡ್ ಇದೆ. ಇದಾದ ಬಳಿಕ ಪಾಕಿಸ್ತಾನದ ಲೈಲಾ ಬರಲಿದ್ದಾಳೆ. ಲೈಲಾಳನ್ನು ಶ್ರೀಲಂಕಾದ ಬಂದು ಹಾಗೂ ಥೈಲ್ಯಾಂಡಿನ ಫೆಟ್ ಅನುಸರಿಸಲಿದ್ದಾರೆ.

ಪಾಕಿಸ್ತಾನವು ಫಾನೂಸ್, ನರ್ಗೀಸ್ ಮತ್ತು ನೀಲೋಫರ್, ತಿತ್ಲಿ ಮತ್ತು ಬುಲ್‌ಬುಲ್ ಎಂಬ ಹೆಸರುಗಳನ್ನು ತಾನು ಕಾಣದ ಮತ್ತು ಕೇಳದ ನೈಸರ್ಗಿಕ ವಿಧ್ವಂಸಗಳಿಗೆ ಇರಿಸಿದೆ.

"ನೀವು (ಸಾರ್ವಜನಿಕರು) ಸಹ ಚಂಡಮಾರುತಗಳಿಗೆ ನಾಮಕರಣ ಮಾಡಬಹುದು, ಇದನ್ನು ಚಂಡಮಾರುತದ ಫೆಸಿಫಿಕ್ ಸಮಿತಿಗೆ ಶಿಫಾರಸ್ಸು ಮಾಡಬಹುದು ಎಂಬುದಾಗಿ ಭಾರತೀಯ ಹವಾಮಾನ ಇಲಾಖೆಯ ಪ್ರಧಾನ್ ನಿರ್ದೇಶಕ ಅಜಿತ್ ತ್ಯಾಗಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ