ಭಾರತ-ಚೀನ ಸಂಬಂಧದಲ್ಲಿ ಅರುಣಾಚಲ ಪ್ರದೇಶವು ಹೆಚ್ಚುಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವಂತೆ, ಭಾರತವು ಅರುಣಾಚಲ ಪ್ರದೇಶದ ಚೀನ ಗಡಿಯುದ್ದಕ್ಕೂ ತನ್ನ ಭದ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಹೆಚ್ಚುವರಿ ಪಡೆಗಳನ್ನು ನೇಮಿಸುತ್ತಿದೆ ಎಂದು ಗುರುವಾರದ ವರದಿಗಳು ತಿಳಿಸಿವೆ.
ಚೀನವು ತನ್ನ ಸೇನಾಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿರುವ ಕುರಿತು ನವದೆಹಲಿಯು ಯಾವುದೇ ಧ್ವನಿ ಎತ್ತದಿದ್ದರೂ, ಅದು ಯಾವುದೇ ಅಪಾಯಗಳಿಗೆ ಒಡ್ಡಿಕೊಳ್ಳಲು ಸಿದ್ಧವಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಚೀನ ಗಡಿಯುದ್ದಕ್ಕೂ, ಅದರಲ್ಲೂ ವಿಶೇಷವಾಗಿ ಅರುಣಾಚಲ ಪ್ರದೇಶದಂತಹ ಸೂಕ್ಷ್ಮ ಸ್ಥಳದಲ್ಲಿ ಸರ್ಕಾರವು ಹೆಚ್ಚುವರಿ ಪಡೆಗಳನ್ನು ನೇಮಿಸಲು ತುರ್ತು ಕ್ರಮ ಕೈಗೊಳ್ಳುತ್ತಿದೆ ಎಂದು ವರದಿಗಳು ಹೇಳಿವೆ.
ತಿಂಗಳೊಳಗಾಗಿ ಅರುಣಾಚಲ ಪ್ರದೇಶದ 56 ವಿಭಾಗಗಳಲ್ಲಿ 15 ಸಾವಿರ ಪಡೆಗಳನ್ನು ನೇಮಿಸಲು ಸರ್ಕಾರವು ಪ್ರಕ್ರಿಯೆಗಳನ್ನು ತುರ್ತುಗೊಳಿಸುತ್ತಿದೆ.
ಅದಾಗ್ಯೂ, ರಾಜತಾಂತ್ರಿಕವಾಗಿ ಅಣ್ವಸ್ತ್ರಶಕ್ತ ಈ ಬಲಾಢ್ಯ ರಾಷ್ಟ್ರಗಳಾದ ಭಾರತ ಮತ್ತು ಚೀನ ನಡುವಿನ ಸಂಬಂಧದಲ್ಲಿ ಗಂಭೀರವಾದ ಸಮಸ್ಯೆ ಇದೆ ಎಂಬುದನ್ನು ಭಾರವು ತಳ್ಳಿಹಾಕುತ್ತಲೇ ಬಂದಿದೆ.
ಇದಲ್ಲದೆ, ಈಶಾನ್ಯ ರಾಜ್ಯಗಳಲ್ಲಿ 300 ಹಗುರ ಟ್ಯಾಂಕ್‌ಗಳ ನಿಯೋಜನೆಗಾಗಿ ಸೇನೆಯು ಮಾಹಿತಿ ವಿನಂತಿಯನ್ನು ರವಾನಿಸಿದೆ ಎಂದು ವರದಿಗಳು ಹೇಳಿವೆ. ಏತನ್ಮಧ್ಯೆ, ಸೇನೆಯು ತನ್ನ ದ್ವಿತೀಯ ವಿಭಾಗದ ನಿಯೋಜನೆಯನ್ನು ಮಂದಿನ 12ರಿಂದ 18 ತಿಂಗಳೊಳಗಾಗಿ ಮಾಡಲಿದೆ.