ಸುಪ್ರೀಂ ಕೋರ್ಟಿನ ಉನ್ನತ ಸಮಿತಿ ಸೂಚಿಸಿದ್ದ ನಾಲ್ವರು ನ್ಯಾಯಮೂರ್ತಿಗಳು ಸೋಮವಾರ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನ್ಯಾಯಮೂರ್ತಿಗಳಾದ ಅನಂಗ ಕುಮಾರ್ ಪಟ್ನಾಯಕ್, ತೀರಥ್ ಸಿಂಗ್ ಠಾಕೂರ್, ಸುರಿಂದರ್ ಸಿಂಗ್ ನಿಜ್ಜಾರ್ ಮತ್ತು ಕೆ.ಎಸ್.ರಾಧಾಕೃಷ್ಣನ್ ಅವರ ನೇಮಕಕ್ಕೆ ರಾಷ್ಟ್ರಪತಿ ಅವರು ಒಪ್ಪಿಗೆ ಸೂಚಿಸಿದ್ದಾರೆ. ಇವರಿಗೆ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ.
ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರನ್ನು ನೇಮಕಾತಿ ಪಟ್ಟಿಯಿಂದ ಕೈಬಿಟ್ಟ ನಂತರ, ಮೇಲಿನ ನ್ಯಾಯಮೂರ್ತಿಗಳನ್ನು ನೇಮಕಕ್ಕೆ ಸುಪ್ರೀಂ ಕೋರ್ಟ್‌ನ ಉನ್ನತ ಸಮಿತಿ ಶಿಫಾರಸು ಮಾಡಿತ್ತು. ಈ ನ್ಯಾಯಮೂರ್ತಿಗಳ ನೇಮಕದಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 26ಕ್ಕೆ ಏರಲಿದ್ದು, ಮಂಜೂರಾದ 30ರಲ್ಲಿ ಉಳಿದ 4 ಸ್ಥಾನಗಳು ಖಾಲಿ ಇವೆ.