ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸನಾತನ ಸಂಸ್ಥಾ ನಿಷೇಧಿಸಿ: ಸಾರ್ವಜನಿಕರ ಆಗ್ರಹ (Sanatan Sanstha | Goa | Ban | village panchayat | Margao bomb blast)
ಸಾಕಷ್ಟು ವಿವಾದಕ್ಕೆ ಒಳಗಾಗಿರುವ ಸನಾತನ ಸಂಸ್ಥಾ ಶಾಖೆಯ ಆರಂಭಕ್ಕೆ ಗೋವಾದ ಬಂಡೋರಾ ಗ್ರಾಮ ಪಂಚಾಯತ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕೂಡಲೇ ಆ ಸಂಸ್ಥೆಯನ್ನು ನಿಷೇಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಲ್ಲಿನ ರಾಮ್‌ನಾತಿ ಪ್ರದೇಶದಲ್ಲಿ ಸನಾತನ ಸಂಸ್ಥಾದ ಆಶ್ರಮವನ್ನು ಹೊಂದಿದೆ. ಸುಮಾರು ದಶಕಗಳ ಕಾಲ ಹಳೆಯದಾದ ಸನಾತನ ಸಂಸ್ಥಾ 2003ರಲ್ಲಿ ಈ ಗ್ರಾಮದಲ್ಲಿ ತನ್ನ ಚಟುವಟಿಕೆಯನ್ನು ನಡೆಸಲು ಆರಂಭಿಸಿತ್ತು. ಸಾಕಷ್ಟು ಪ್ರಚಾರ, ಹೆಸರು ಪಡೆದಿದ್ದ ಸನಾತನ ಸಂಸ್ಥಾ ಏಕಾಏಕಿ ಆರೋಪವನ್ನು ಎದುರಿಸುವಂತಾಗಿತ್ತು.
ಗೋವಾ-ಮರ್ಗೋವಾದ ವಾಣಿಜ್ಯ ಸಂಕೀರ್ಣದಲ್ಲಿ ಸ್ಫೋಟ ಪ್ರಕರಣ ಸಂಭವಿಸಿದ ನಂತರ ಈ ಘಟನೆಯ ಹಿಂದೆ ಸನಾತನ ಸಂಸ್ಥಾದ ಕಾರ್ಯಕರ್ತರು ಭಾಗಿಯಾಗಿದ್ದರು ಎಂಬ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಸಂಸ್ಥಾದ ಪ್ರತಿಷ್ಠೆಗೆ ಕಳಂಕ ಅಂಟಿಕೊಂಡಿತ್ತು.
ಆ ನಿಟ್ಟಿನಲ್ಲಿ ಸನಾತನ ಸಂಸ್ಥಾವನ್ನು ನಿಷೇಧಿಸಬೇಕೆಂದು ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಬಿಸಿ, ಬಿಸಿ ಚರ್ಚೆ ನಡೆದಿದೆ. ಅಲ್ಲದೆ, ಗ್ರಾಮ ಪಂಚಾಯಿತಿಯಲ್ಲಿ ಸಂಸ್ಥಾವನ್ನು ನಿಷೇಧಿಸಲು ನಿರ್ಣಯ ಕೈಗೊಂಡಿದ್ದು ಹಾಗೂ ಆಶ್ರಮದ ಬಗ್ಗೆ ತನಿಖೆ ನಡೆಸಬೇಕೆಂದು ಒಮ್ಮತದ ತೀರ್ಮಾನ ತೆಗೆದುಕೊಂಡಿರುವುದಾಗಿ ಬಂಡೋರಾ ಪಂಚಾಯತ್ ಕಾರ್ಯದರ್ಶಿ ದಿವಾಕರ್ ಸಾಲೆಲ್‌ಕರ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.