ಜೆಮ್ಶೆದ್ಪುರ, ಶುಕ್ರವಾರ, 13 ನವೆಂಬರ್ 2009( 11:26 IST )
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧುಕೋಡಾ ಅವರು ಒಳಗೊಂಡಿದ್ದಾರೆನ್ನಲಾಗಿರುವ ಬಹುಕೋಟಿ ಹವಾಲ ಪ್ರಕರಣದ ತನಿಖೆ ನಡೆಸುತ್ತಿರುವ ಆದಾಯ ತೆರಿಗೆ ಇಲಾಖಾ ಅಧಿಕಾರಿಯೊಬ್ಬರ ಪುತ್ರನ ಮೇಲೆ ಇಬ್ಬರು ಅಪರಿಚಿತರು ಗುರುವಾರ ರಾತ್ರಿ ಹಲ್ಲೆ ನಡೆಸಿದ್ದಾರೆ.
ಆದಾಯ ತೆರಿಗೆ ಅಧಿಕಾರಿ ಎ.ಕೆ. ಮಜ್ಹಿ ಎಂಬವರ ಪುತ್ರ ಅಭಿಶೇಕ್ ಮಜ್ಹಿ ಎಂಬಾತ ತನ್ನ ಮನೆಗೆ ಹಿಂತಿರುಗುತ್ತಿದ್ದ ವೇಳೆ ಕಾದು ಕುಳಿತಿದ್ದ ಇಬ್ಬರು ಅಭಿಶೇಕ್ ಮೇಲೆ ಸಕ್ಚಿ ಪೊಲೀಸ್ ಠಾಣಾ ವ್ಯಾಪ್ತಿಯ ಚೀನಬ್ ರಸ್ತೆ ಸಮೀಪ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆಕೋರರನ್ನು ಮಧುಕೋಡಾ ಬೆಂಬಲಿಗರೆಂದು ಶಂಕಿಸಲಾಗಿದೆ.
ಅಭಿಶೇಕ್ ಕೆಳಗಡೆ ಬಿದ್ದಮೇಲೂ ಆತನಿಗೆ ಹಲ್ಲೆ ನಡೆಸಿದ ದುಷ್ಕರ್ಮಿಗಳು ಬಳಿಕ ಆತನ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಲ್ಲೆಯಿಂದ ತಲೆಗೆ ಗಾಯಗೊಂಡಿರುವ ಅಭಿಶೇಕ್ ಅವರನ್ನು ಟಾಟ ಅಸ್ಪತ್ರೆಗೆ ದಾಖಲಿಸಲಾಗಿದೆ.