ಚಾರು(ರಾಜಸ್ಥಾನ), ಶುಕ್ರವಾರ, 13 ನವೆಂಬರ್ 2009( 15:27 IST )
ನಕಲಿ ಛಾಪಾಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಒಂದು ಎರಡು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿದಂತೆ ತಲಾ ಏಳು ವರ್ಷಗಳ ಶಿಕ್ಷೆ ವಿಧಿಸಿದೆ.
ಬಹುಕೋಟಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಊರ್ಮಿಳಾ ವರ್ಮಾ ಅವರು ತೆಲಗಿಗೆ ಏಳುವರ್ಷಗಳ ಜೈಲು ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ತೆಲಗಿ ಕೋಟ್ಯಂತರ ರೂಪಾಯಿ ಮೊತ್ತದ ನಕಲಿ ಛಾಪಾಕಾಗದ ಮುದ್ರಿಸಿ ಮಾರಿರುವ ಹಗರಣ ಎಸಗಿರುವುದಾಗಿ ಆರೋಪಿಸಲಾಗದೆ. ಈ ಪ್ರಕರಣವು 1995ರಲ್ಲಿ ನಡೆದಿದೆ.
ಮತ್ತೊಂದು ಪ್ರಕರಣದಲ್ಲಿ ತೆಲಗಿ ಕಾರ್ಮಿಕರಿಗೆ ನಕಲಿ ಪಾಸ್ಪೋರ್ಟ್ ನೀಡಿರುವ ಆರೋಪ ಎದುರಿಸುತ್ತಿದ್ದು, ಈ ಪ್ರಕರಣಕ್ಕೂ ನ್ಯಾಯಾಲಯವು ಮತ್ತೆ ಏಳು ವರ್ಷಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ತೆಲಗಿಯನ್ನು ಇಲ್ಲಿಗೆ ಬೆಂಗಳೂರು ಜೈಲಿನಿಂದ ಕರೆತರಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.