ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಶೇ.50ರಷ್ಟು ಸ್ಥಾನಗಳನ್ನು ಮೀಸಲಿಡಲು ಮಧ್ಯಪ್ರದೇಶ ಮುಂದಾಗಿದೆ.
ಮಧ್ಯಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳು ಮುಂಬರುವ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. ಡಿಸೆಂಬರ್ 11 ಮತ್ತು 14ರ ಎರಡು ಹಂತಗಳಲ್ಲಿ ಇಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗಳು ನಿಗದಿಯಾಗಿದೆ.
ಮಧ್ಯಪ್ರದೇಶದ ಈ ನಿರ್ಧಾರವನ್ನು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶೋಭಾ ಓಜಾ ಅವರು ಸ್ವಾಗತಿಸಿದ್ದು, "ಪಂಚಾಯತ್‌ಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ನೀಡಿದ ಬಳಿಕ ಮಹಿಳೆಯರು ಕಾರ್ಪೋರೇಟರ್, ಶಾಸಕಿಯರು ಮತ್ತು ಸಂಸದರು ಆಗಿದ್ದಾರೆ" ಎಂಬುದಾಗಿ ಹೇಳಿದ್ದಾರೆ.
ಮಹಿಳೆಯರು ಮೀಸಲಾತಿ ಸ್ಥಾನಗಳು ಮಾತ್ರವಲ್ಲ, ಮುಕ್ತ ಸ್ಥಾನಗಳಲ್ಲೂ ಸ್ಫರ್ಧಿಸಲು ಮುಂದಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.