ಶಂಕಿತ ಅಮೆರಿಕ ಉಗ್ರ ಡೇವಿಡ್ ಹೆಡ್ಲಿ ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಮುಂಬೈ ಮೇಲೆ ಉಗ್ರರು ನಡೆಸಿದ ಮಾರಣಾಂತಿಕ ದಾಳಿಗೆ ಮುಂಚಿತವಾಗಿ ದೆಹಲಿಯ ಹೋಟೇಲೊಂದರಲ್ಲಿ ತಂಗಿದ್ದ ಎಂಬುದಾಗಿ ದಾಖಲೆಗಳು ಹೇಳಿವೆ.
ಹೆಡ್ಲಿಯ ಪಾಸ್ಪೋರ್ಟ್ ವಿವರಣೆಗಳ ಪ್ರಕಾರ ಆತ ದೆಹಲಿ ಮತ್ತು ಮುಂಬೈಗೆ ಕಳೆದ ವರ್ಷದ ಎಪ್ರಿಲ್ ತಿಂಗಳಲ್ಲಿ ಭೇಟಿ ನೀಡಿದ್ದು, ಬಳಿಕ ಪಾಕಿಸ್ತಾನಕ್ಕೆ ತೆರಳಿದ್ದ.
ಮುಂಬೈ ಮೇಲೆ ನಡೆಸಿರುವ ದಾಳಿಯ ಹಿಂದಿರುವ ಉಗ್ರಗಾಮಿ ಸಂಘಟನೆಯಾಗಿರುವ ಲಷ್ಕರೆಯೊಂದಿಗೆ ಸಂಪರ್ಕ ಹೊಂದಿರುವ ಕಾರಣದ ಹಿನ್ನೆಲೆಯಲ್ಲಿ ಎಫ್‌ಬಿಐ ಹೆಡ್ಲಿಯನ್ನು ಕಳೆದ ತಿಂಗಳು ನ್ಯೂಯಾರ್ಕ್‌ನಲ್ಲಿ ಬಂಧಿಸಿತ್ತು.
ಹೆಡ್ಲಿಗೆ ಇಂಡಿಯನ್ ಮುಜಾಹಿದೀನ್ ಜತೆಗೆ ಸಂಪರ್ಕವಿದೆಯೇ ಎಂಬ ಕುರಿತೂ ಸಹ ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇಂಡಿಯನ್ ಮುಜಾಹಿದೀನ್ ಸಂಘಟನೆಯು ರಾಜಸ್ಥಾನ ಹಾಗೂ ದೆಹಲಿ ಸೇರಿದಂತೆ ರಾಷ್ಟ್ರಾದ್ಯಂತ ಸರಣಿ ಬಾಂಬ್ ಸ್ಫೋಟಗಳನ್ನು ನಡೆಸಿದೆ. ಈ ದಾಳಿಗಳಲ್ಲಿ ಸುಮಾರು 170ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.