ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋಹತ್ಯೆ ನಿಷೇಧಿಸುತ್ತಿಲ್ಲವೇಕೆ?: ಕೇಂದ್ರಕ್ಕೆ ತೊಗಾಡಿಯಾ (Cow Slaughter | Vishwa Hindu Parishad | VHP | Praveen Togadia)
Feedback Print Bookmark and Share
 
PTI
ಗೋ ಹತ್ಯೆ ನಿಷೇಧಿಸುವ ಮೂಲಕ ಹಸುಗಳ ರಕ್ಷಣೆಗೆ ಮುಂದಾಗುವಂತೆ ವಿಶ್ವಹಿಂದೂ ಪರಿಷತ್ತು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ. ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಮಹಾ ಕಾರ್ಯದರ್ಶಿ ಪ್ರವೀಣ್ ಭಾಯಿ ತೊಗಾಡಿಯಾ, ಗೋಹತ್ಯೆ ನಿಷೇಧಿಸುವ ಕಾನೂನು ಜಾರಿಗೆ ತರಲು ಕಾಂಗ್ರೆಸ್ ನೇತೃತ್ವದ ಯುಪಿಎ ಹಿಂದೆ-ಮುಂದೆ ನೋಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

ರೈತರು ಇದೀಗ ಸಂಕಷ್ಟದಲ್ಲಿದ್ದಾರೆ. ಬೆಲೆ ಏರಿಕೆಯ ಕಾರಣದಿಂದಾಗಿ ಆರ್ಥಿಕವಾಗಿ ಸೊರಗಿರುವ ರೈತರು, ಹಸುಗಳನ್ನು ಸಾಕಲಾರದೆ ಅವುಗಳನ್ನು ವಧಾಗೃಹಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದ ತೊಗಾಡಿಯಾ, ಗೋವುಗಳನ್ನು ಹತ್ಯೆ ಮಾಡುವವರಿಗೆ ದೇಹದಂಡನೆಯಂತಹಾ ಕಠಿಣ ಶಿಕ್ಷೆಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಗೋವುಗಳು ಮೇಯುವುದಕ್ಕಾಗಿ ಜಮೀನು ಮೀಸಲಿಡುವಂತೆಯೂ ಸರಕಾರವನ್ನು ಒತ್ತಾಯಿಸಿದ ತೊಗಾಡಿಯಾ, ಗೋಮಾಳಗಳನ್ನು ಅತಿಕ್ರಮಿಸಿಕೊಂಡಿರುವ ಜನರನ್ನು ಎಬ್ಬಿಸಿ, ಅವರಿಂದ ಈ ಜಮೀನು ಮರುವಶಪಡಿಸಿಕೊಳ್ಳಲು ಆಯಾ ಸರಕಾರಗಳು ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದರು.

ಗೋವಿನ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಸಬೇಕಾಗಿದೆ. ವೈಜ್ಞಾನಿಕವಾಗಿ ಆರೋಗ್ಯಕರ ಎಂದು ಸಾಬೀತಾಗಿರುವ ಈ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಟ್ಟಲ್ಲಿ ರೈತರ ಬಾಳು ಕೂಡ ಹಸನಾಗುತ್ತದೆ ಎಂದು ತೊಗಾಡಿಯಾ ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ