ಬಿಜೆಪಿಯನ್ನು ಮತ್ತೊಮ್ಮೆ ಟೀಕಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಅದು ಒಡೆದ ಮನೆಯಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ ಒಡೆದ ಮನೆಯಾಗಿದೆ. ಒಡೆದ ಮನೆ ಸರಿಯಾಗಿ ಕೆಲಸ ಮಾಡುವುದು ಸಾಧ್ಯವಿಲ್ಲ ಎಂದು ಅವರು ಹೇಳಿದ ಅವರು, ಬಿಜೆಪಿ ತನ್ನ ಮೂಲವನ್ನು ಅರಿತುಕೊಳ್ಳಬೇಕು. ನಮಗೆ ಆತ್ಮವಿಶ್ವಾಸವಿದ್ದರೆ ನಾವು ಯೋಚಿಸಿದ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು.
ಮುಂದಿನ ಬಿಜೆಪಿ ಮುಖ್ಯಸ್ಥ ದೆಹಲಿಯ ಹೊರಗಿನವರು ಎಂದು ಈ ಮೊದಲೇ ಭಾಗವತ್ ಹೇಳಿದ್ದರು ಮತ್ತು ಈ ಪದವಿಗೆ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ನಿತಿನ್ ಗಡ್ಕರಿ ಹೆಸರು ಸೂಚಿಸಿದ್ದರು.
ಆದರೆ, ಬಿಜೆಪಿ ಈ ಪದವಿಯನ್ನು ಗಡ್ಕರಿಗೆ ನೀಡುವ ಕುರಿತು ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ.