ಯುದ್ಧಪೀಡಿತ ಇರಾಕ್ ಹೊರತುಪಡಿಸಿದರೆ ಭಾರತ ಭಯೋತ್ಪಾದನೆಯಿಂದ ಭೀಕರವಾಗಿ ಪೀಡಿತವಾದ ಎರಡನೇ ರಾಷ್ಟ್ರವಾಗಿದ್ದು, 2008ರಲ್ಲೇ 8 ಭಯೋತ್ಪಾದನೆ ದಾಳಿಗಳಿಗೆ ಸಿಲುಕಿದ್ದು, ಕಳೆದ ಕೆಲವು ವರ್ಷಗಳಲ್ಲಿ 3500 ಜನರು ಬಲಿಯಾಗಿದ್ದಾರೆ.
ನಗರ ಮೂಲದ ಎನ್‌ಜಿಒ 'ಬಾಂಬೆ ಫಸ್ಟ್' ಅಮೆರಿಕದ ವರದಿಯೊಂದನ್ನು ಉಲ್ಲೇಖಿಸಿ, ಕಳೆದ ವರ್ಷ ಭಯೋತ್ಪಾದನೆ ದಾಳಿಗಳಲ್ಲಿ ಜೀವ ಕಳೆದುಕೊಂಡವರ ಸಂಖ್ಯೆಯಲ್ಲಿ ಇರಾಕ್ ಬೆನ್ನಹಿಂದೆಯೇ ಭಾರತ ಅನುಸರಿಸುತ್ತದೆಂದು ಹೇಳಿದೆ.ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಭಯೋತ್ಪಾದನೆ ದಾಳಿಗಳು ತೀವ್ರಸ್ವರೂಪ ಪಡೆದುಕೊಂಡಿದ್ದು, 3674 ಜನರನ್ನು ಬಲಿತೆಗೆದುಕೊಂಡಿದೆ ಮತ್ತು ಇರಾಕ್ ನಂತರ ಎರಡನೇ ಸ್ಥಾನದಲ್ಲಿದೆಯೆಂದು ಎನ್‌ಜಿಒ ಅಧ್ಯಕ್ಷ ನಾರಿಂದರ್ ನಾಯರ್ ಹೊಟೆಲ್ ಟ್ರೈಡೆಂಟ್‌ನಲ್ಲಿ ಆಯೋಜಿಸಿದ್ದ ಭದ್ರತಾ ಶೃಂಗಸಭೆಯಲ್ಲಿ ತಿಳಿಸಿದರು.
ಸುಮಾರು 3 ದಶಕಗಳಿಂದ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಭಾರತ,ಬಾಹ್ಯ ಮತ್ತು ಆಂತರಿಕ ದಾಳಿಗಳನ್ನು ಎದುರಿಸಿದೆಯೆಂದು ನಾಯರ್ ಹೇಳಿದರು. ಅಮೆರಿಕ ಮತ್ತು ಬ್ರಿಟನ್ ಸೇರಿದಂತೆ ಜಾಗತಿಕ ಭದ್ರತಾ ತಜ್ಞರು ಶೃಂಗಸಭೆಯಲ್ಲಿ ಭಾಗವಹಿಸಿ, ಭಯೋತ್ಪಾದನೆಯ ವಿವಿಧ ಮಗ್ಗಲುಗಳನ್ನು ಚರ್ಚಿಸಿದ ಅನುಭವಗಳನ್ನು ಹಂಚಿಕೊಂಡರು. ಪ್ರಧಾನಮಂತ್ರಿ ತಿಳಿಸಿರುವಂತೆ 26/11 ಭಯೋತ್ಪಾದನೆ ದಾಳಿಗಳು ಮುಂಬೈಯನ್ನು ವಿಶ್ವನಗರಿಯಾಗಿಸುವ ಕನಸುಗಳು ಮತ್ತು ಆಶೋತ್ತರಗಳ ಮೇಲೆ ದಾಳಿ ಎಂದು ನಾಯರ್ ಹೇಳಿದ್ದಾರೆ.