ಭಯೋತ್ಪಾದಕರ ದಾಳಿ ಸಂಚಿನ ಆತಂಕದ ನಡುವೆಯೇ ಪಾಕಿಸ್ತಾನದ ಗೂಢಚಾರ ಸಂಸ್ಥೆಯ ಏಜೆಂಟ್‌ವೊಬ್ಬನನ್ನು ಶನಿವಾರ ರಾತ್ರಿ ಭಾರತೀಯ ಅಧಿಕಾರಿಗಳು ಬಂಧಿಸಲಾಗಿದೆ.
ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ಗೂಢಚಾರ ಸಂಸ್ಥೆಯ ಶಂಕಿತ ಏಜೆಂಟ್‌ನನ್ನು ನಿನ್ನೆ ರಾತ್ರಿ ಬಂಧಿಸಿರುವುದನ್ನು ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಜಿ.ಕೆ.ಪಿಳ್ಳೈ ಖಚಿತಪಡಿಸಿದ್ದಾರೆ.
ಬಂಧಿತ ವ್ಯಕ್ತಿಯ ಹೆಸರು ವಿವರಗಳನ್ನು ಅಧಿಕಾರಿಗಳು ನಿರಾಕರಿಸಿದ್ದು, ಆತನನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಭಾರತದ ಮೇಲೆ ಭಯೋತ್ಪಾದಕ ಸಂಘಟನೆಗಳು ಮತ್ತೆ ದಾಳಿಯ ನಡೆಸುವ ಕುರಿತು ಗುಪ್ತಚರ ಇಲಾಖೆ ಮುನ್ಸೂಚನೆ ನೀಡಿದೆ.
ಆ ನಿಟ್ಟಿನಲ್ಲಿ ಬಂಧಿತ ಏಜೆಂಟ್‌ನನ್ನು ವಿಚಾರಣೆಗೆ ಗುರಿಪಡಿಸಲಾಗಿದ್ದು, ಆತನ ಉದ್ದೇಶಗಳ ಬಗ್ಗೆ ನಂತರ ವಿವರಿಸಲಾಗುವುದು ಎಂದು ಪಿಳ್ಳೈ ತಿಳಿಸಿದ್ದಾರೆ.