ಕಾರ್ಗಿಲ್ ದಾಳಿಗೆ ಭಾರತ ಪುಕ್ಕಲು ಪ್ರತಿಕ್ರಿಯೆ ನೀಡಿತ್ತು: ಸಿಂಗ್
ನವದೆಹಲಿ, ಮಂಗಳವಾರ, 17 ನವೆಂಬರ್ 2009( 09:16 IST )
1999ರಲ್ಲಿ ಕಾರ್ಗಿಲ್ ಒಳಹೊಕ್ಕು ಪಾಕಿಸ್ತಾನದ ಸೇನೆಗೆ ಭಾರತದ 'ಪುಕ್ಕಲು'ಪ್ರತಿಕ್ರಿಯೆ ನೀಡಿದ್ದೇ 2001ರ ಸಂಸತ್ ಭವನ ದಾಳಿ ಮತ್ತು ನಂತರ ನಡೆದಿರುವ ಸರಣಿ ಉಗ್ರರ ದಾಳಿಗೆ ಕಾರಣ ಎಂದು ನಿವೃತ್ತ ಸೇನಾ ಜನರಲ್ ಒಬ್ಬರು ಆರೋಪಿಸಿದ್ದಾರೆ.
ದೇಶದ ಆಗಿನ ರಾಜಕೀಯ, ಕಾರ್ಯನಿರ್ವಾಹಕ ಮತ್ತು ಸೇನಾ ಮುಖಂಡತ್ವ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್, ಸೇನಾ ಮುಖ್ಯಸ್ಥ ಜನರಲ್ ವಿ.ಪಿ.ಮಲಿಕ್ ಮತ್ತು ಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ವೈ.ಟಿಪ್ನಿಸ್ ಅವರು ಸವಾಲನ್ನು ಎದುರಿಸುವಲ್ಲಿ ವಿಫಲರಾದರು ಎಂದು ತಿಳಿಸಿದ್ದಾರೆ.
ಕಾರ್ಗಿಲ್‌ನಲ್ಲಿ ನಮ್ಮ(ಎನ್‌ಡಿಎ ಸರ್ಕಾರದ ರಾಜಕೀಯ ಮತ್ತು ಮಿಲಿಟರಿ ಮುಖಂಡತ್ವ) ಪುಕ್ಕಲು ಪ್ರತಿಕ್ರಿಯೆ ಭಾರತದಲ್ಲಿ ಮುಂದಿನ ಉಗ್ರರ ದಾಳಿಗೆ ಅಡಿಪಾಯ ಹಾಕಿತು ಎಂದು ಮಾಜಿ ಉಪಸೇನಾ ಮುಖ್ಯಸ್ಥ ಲೆ.ಜ.ಹರ್ವಂತ್ ಸಿಂಗ್ ಇಂಡಿಯನ್ ಡಿಫೆನ್ಸ್ ರಿವ್ಯೆನ್ ಮುಂಬರುವ ಲೇಖನವೊಂದರಲ್ಲಿ ಹೇಳಿದ್ದಾರೆ.