ಭ್ರಷ್ಟಾಚಾರ ವಿಚಾರದಲ್ಲಿ ಭಾರತ ಇನ್ನೂ ತನ್ನ ಹೆಸರನ್ನು ಅತ್ಯಂತ ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ ಉಳಿಸಿಕೊಂಡಿದೆ. ಟ್ರಾನ್ಸ್‌ಫರೆನ್ಸಿ ಇಂಟರ್‌ನ್ಯಾಶನಲ್ ನಡೆಸಿರುವ ತನ್ನ ವಾರ್ಷಿಕ ಸಮೀಕ್ಷೆಯಲ್ಲಿ ಭಾರತವು ಭ್ರಷ್ಟ ರಾಷ್ಟ್ರಗಳ ಪಟ್ಟಿಯಲ್ಲಿ 84 ಸ್ಥಾನ ಪಡೆದುಕೊಂಡಿದೆ.
180 ರಾಷ್ಟ್ರಗಳ ಪಟ್ಟಿಯಲ್ಲಿ 84ನೆ ಸ್ಥಾನ ಪಡೆದುಕೊಂಡಿರುವ ಭಾರತದ ಸಾರ್ವಜನಿಕ ವಲಯದಲ್ಲಿ ಅತ್ಯಂತ ಹೆಚ್ಚು ಲಂಚಾವತಾರ ನಡೆಯುತ್ತಿದೆ ಎಂದು ಸಮೀಕ್ಷೆ ಹೇಳಿದೆ.
ಭ್ರಷ್ಟ ರಾಷ್ಟ್ರಗಳನ್ನು ಹೆಸರಿಸುವ ಈ ಅಂತಾರಾಷ್ಟ್ರೀಯ ಸಂಸ್ಥೆಯು, ಟ್ಸಾಕ್ಸ್ ಹೆವನ್‌ಗಳೆಂದು ಪರಿಗಣಿಸಲಾಗಿರುವ ಸ್ವಿಜರ್‌ಲ್ಯಾಂಡ್ ಮತ್ತು ಲಿಚೆನ್‌ಸ್ಟೆನ್‌ಗಳು ರಹಸ್ಯ ಬ್ಯಾಂಕಿಂಗ್ ಕಾನೂನುಗಳಿಂದ ದೂರವಿರಬೇಕು ಎಂಬುದಾಗಿ ಮೊದಲಬಾರಿಗೆ ಶಿಫಾರಸ್ಸು ಮಾಡಿದೆ.
ಭ್ರಷ್ಟ ಹಣಕ್ಕೆ ಸುರಕ್ಷಿತ ತಾಣ ಲಭಿಸಬಾರದು. ರಹಸ್ಯ ಬ್ಯಾಂಕಿಂಗ್ ಕಾನೂನುಗಳಿಗೆ ಅಂತ್ಯ ಹಾಡಲು ಇದೀಗ ಸೂಕ್ತ ಸಮಯ ಎಂಬುದಾಗಿ ಬರ್ಲಿನ್ ಮೂಲದ ಸಂಸ್ಥೆಯ ಮುಖ್ಯಸ್ಥ ಹಗುಟೆ ಲಬೆಲ್ಲೆ ಹೇಳಿದ್ದಾರೆ.
ಭ್ರಷ್ಟಾಚಾರದ ವಿಚಾರದಲ್ಲಿ ಭಾರತಕ್ಕಿಂತಲೂ ಕೆಟ್ಟು ಕೆರಹಿಡಿದಿರುವ ಕೊನೆಯ ಐದು ರಾಷ್ಟ್ರಗಳೆಂದರೆ, ಸೊಮಾಲಿಯ, ಅಫ್ಘಾನಿಸ್ತಾನ, ಮ್ಯನ್ಮಾರ್ ಮತ್ತು ಇರಾಕ್. ಲಂಚಾವತಾರವಿಲ್ಲದ ಪರಿಶುದ್ಧ ಹತ್ತು ರಾಷ್ಟ್ರಗಳಲ್ಲಿ ನ್ಯೂಜಿಲ್ಯಾಂಡ್, ಡೆನ್ಮಾರ್ಕ್ ಹಾಗೂ ಸಿಂಗಾಪುರ ಮೊದಲ ಸ್ಥಾನ ಪಡೆದುಕೊಂಡಿವೆ.
ಪಟ್ಟಿಯಲ್ಲಿ ಕಮ್ಮಿ ಭ್ರಷ್ಟ ರಾಷ್ಟ್ರಗಳು ಮೇಲಿನ ಸ್ಥಾನಗಳನ್ನು ಪಡೆಯುತ್ತವೆ. ಹೆಚ್ಚೆಚ್ಚು ಭ್ರಷ್ಟ ರಾಷ್ಟ್ರಗಳು ಕೊನೆಯ ಸ್ಥಾನಕ್ಕೆ ತಳ್ಳಲ್ಪಡುತ್ತವೆ.