ಕುತೂಹಲ ಕೆರಳಿಸಿರುವ ರೈಲ್ವೆ ಶ್ವೇತಪತ್ರ ಮುಂದಿನ ಸಂಸತ್ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಗಳಿವೆ. ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ಮಂಗಳವಾರ ಈ ವಿಷಯ ಸ್ಪಷ್ಟಪಡಿಸಿದ್ದಾರೆ.
ಹಿಂದಿನ ರೈಲ್ವೆ ಬಜೆಟ್ ಸಂದರ್ಭದಲ್ಲಿ ಸಚಿವೆ ಮಮತಾ ಬ್ಯಾನರ್ಜಿ, ಕಳೆದ ಐದು ವರ್ಷಗಳಲ್ಲಿ ರೈಲ್ವೆಯ ಸಾಂಸ್ಥಿಕ, ಕಾರ್ಯನಿರ್ವಹಣೆ ಮತ್ತು ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಶ್ವೇತಪತ್ರ ಹೊರಡಿಸುವುದಾಗಿ ಹೇಳಿದ್ದರು.
ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯೋಜನೆಗಳಲ್ಲಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪಕ್ಕೆ ಇದರಲ್ಲಿ ಮಮತಾ ಸಾಕ್ಷ್ಯ ಒದಗಿಸಿದ್ದಾರೆ ಎಂಬುದಕ್ಕೆ ಕುತೂಹಲ ಕೆರಳಿಸಿದೆ.