ತಿರುವನಂತಪುರಂ, ಬುಧವಾರ, 18 ನವೆಂಬರ್ 2009( 16:04 IST )
ಕಾಸರಗೋಡಿನಲ್ಲಿ ಇತ್ತೀಚೆಗೆ ನಡೆದಿರುವ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಕೇರಳ ಸರ್ಕಾರ ಇಂದು ಆದೇಶ ನೀಡಿದೆ. ಪೊಲೀಸರು ಗುಂಡುಹಾರಿಸಿದ್ದ ವೇಳೆ ಇಂಡಿಯನ್ ಮುಸ್ಲಿಂ ಲೀಗ್ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದರು.
ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಈ ವಿಚಾರವನ್ನು ಸುದ್ದಿಗಾರರಿಗೆ ತಿಳಿಸಿದರು. ತನಿಖೆಯ ಶಿಫಾರಸ್ಸಿನ ನಿಬಂಧನೆಗಳನ್ನು ಬಳಿಕ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಪೊಲೀಸ್ ಗುಂಡು ಹಾರಾಟದಲ್ಲಿ ಐಯುಎಂಎನ್ ಕಾರ್ಯಕರ್ತನೊಬ್ಬ ಸಾವನ್ನಪ್ಪಿದ್ದರೆ, ಭಾನುವಾರ ಸಂಘಟನೆಯು ಜಾಥಾವೊಂದನ್ನು ಹಮ್ಮಿಕೊಂಡಿದ್ದ ವೇಳೆ ಇನ್ನೋರ್ವ ಕಾರ್ಯಕರ್ತ ಚೂರಿ ಇರಿತದಿಂದ ಸಾವನ್ನಪ್ಪಿದ್ದರು.
ಈ ಕುರಿತು ಕಾಂಗ್ರೆಸ್ ಸೇರಿದಂತೆ ಹೆಚ್ಚಿನೆಲ್ಲಾ ಪಕ್ಷಗಳು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದವು.