ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನನ್ನು ಭಾವಿ ಪ್ರಧಾನಿ ಅನ್ನದಿರಿ: ರಾಹುಲ್ ಗಾಂಧಿ (Rahul Gandhi | future | PM | predict)
Feedback Print Bookmark and Share
 
PTI
ದಯವಿಟ್ಟು ತನ್ನನ್ನು ಯಾರೂ ಭವಿಷ್ಯದ ಪ್ರಧಾನಿ ಎಂದು ಭಾವಿಸದಿರಿ ಎಂದು ಜನತೆಯಲ್ಲಿ ಮನವಿ ಮಾಡಿರುವ ರಾಹುಲ್ ಗಾಂಧಿ, ಭವಿಷ್ಯವನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

"ದಯವಿಟ್ಟು ನನ್ನನ್ನು ಭಾವಿ ಪ್ರಧಾನಿ ಎಂದು ಪರಿಗಣಿಸದಿರಿ. ಯಾರೂ ಭವಿಷ್ಯವನ್ನು ಊಹಿಸುವಂತಿಲ್ಲ ಮತ್ತು ಏನು ನಡೆಯುತ್ತದೆ ಎಂದು ಹೇಳುವಂತಿಲ್ಲ. ಯಾರು ಬೇಕಿದ್ದರೂ ಪ್ರಧಾನಿಯಾಗಬಹುದು" ಎಂಬುದಾಗಿ ರಾಹುಲ್ ಹೇಳಿದ್ದಾರೆ. ಅವರು ಇಲ್ಲಿನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದರು. ಕಾರ್ಯಕ್ರಮದಲ್ಲಿ ಸುಮಾರು 1,500 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಲವು ವಿದ್ಯಾರ್ಥಿಗಳು ರಾಹುಲ್‌ರನ್ನು ಭಾವಿ ಪ್ರಧಾನಿ ಎಂಬುದಾಗಿ ಉಲ್ಲೇಖಿಸಿದ ವೇಳೆ ಅವರು ಈ ಮನವಿ ಮಾಡಿದ್ದಾರೆ. ಪ್ರಸಕ್ತ ಪ್ರಧಾನಿ ಮನಮೋಹನ್ ಸಿಂಗ್ ಅವರು ಉತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಭಯೋತ್ಪಾದನೆಯ ಕುರಿತು ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರಾಷ್ಟ್ರವು ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನಿಗೆ ಅನುಸಾರವಾಗಿ ನಡೆದುಕೊಳ್ಳುತ್ತಿದೆ ಎಂದು ಉತ್ತರಿಸಿದರು. ಇದೇವೇಳೆ, ಜಾಗತಿಕ ತಾಪಮಾನ, ಮೀಸಲಾತಿ ಹಾಗೂ ಇತರ ವಿಚಾರಗಳ ಕುರಿತು ಪ್ರಶ್ನೆಗಳೂ ಕಾಂಗ್ರೆಸ್‌ನ ಈ ಯುವನಾಯಕನಿಗೆ ಎದುರಾಯಿತು.
ಸಂಬಂಧಿತ ಮಾಹಿತಿ ಹುಡುಕಿ