ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 26/11ರಂದು ಕಾಮಾದಲ್ಲಿ ಜನಿಸಿದ 'ಗೋಲಿ'ಯ ಬರ್ತ್‌ಡೇ (First birthday | Goli | 26/11 | attack site)
Feedback Print Bookmark and Share
 
ಆ ಕರಾಳ ದಿನದಂದು ಮುಂಬೈಯ ಕಾಮಾ ಆಸ್ಪತ್ರೆಯಲ್ಲಿ ಒಂದೆಡೆ ಉಗ್ರರು ನಿರ್ದಯವಾಗಿ ಗುಂಡುಹಾರಿಸಿ ಅಮಾಯಕರನ್ನು ಕೊಲ್ಲುತ್ತಿದ್ದರು. ಆದರೆ ಮತ್ತೊಂದೆಡೆ ಆ ತಾಯಿಗೆ ಹೆರಿಗೆ ನೋವು. ಹೊಟ್ಟೆಯೊಳಗಿದ್ದ ಮಗು ಭಯೋತ್ಪಾದಕರಿಗೆ ಭಯಗೊಂಡು ಭೂಮಿಗೆ ಬರದೇ ಇರಲಿಲ್ಲ. ಗುಂಡಿನ ಸದ್ದಿನ ನಡುವೆಯೇ ಜನಿಸಿದ ಆ ಹೆಣ್ಣು ಮಗುವಿಗೆ ಹೆತ್ತವರು ಇರಿಸಿದ ಹೆಸರು ಗೋಲಿ! ಇದೀಗ ಗೋಲಿಗೆ ಹುಟ್ಟುಹಬ್ಬದ ಸಂಭ್ರಮ. ನಾಡಿದ್ದು 26ನೆ ತಾರೀಕಿನಂದು ಈ ಪುಟ್ಟಿಗೆ ಒಂದು ತುಂಬುತ್ತಿದೆ.

ವಿಜು ಚೌವಾಣ್ ಎಂಬ 30ರ ಹರೆಯದ ಮಹಿಳೆಗೆ 2008ರ ನವೆಂಬರ್ 26ರ ಆ ಭೀಕರ ರಾತ್ರಿ ಎಂಟು ಗಂಟೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಆಕೆಯನ್ನು ಕಾಮಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮವಿತ್ತಿದ್ದರು. ಕೆಲವೇ ನಿಮಿಷಗಳ ಮುಂಚಿತವಾಗಿ ಉಗ್ರ ಕಸಬ್ ಹಾಗೂ ಆತನ ಸಹಚರ ಅಲ್ಲಿ ಹಲವಾರು ಮಂದಿಯನ್ನು ಕೊಂದು ಮಾರಣಹೋಮ ನಡೆಸಿದ್ದ ವಿಚಾರ ಆಕೆಗೆ ತಿಳಿದಿರಲಿಲ್ಲ.

"ಅಂದು ಈ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಎರಡು ಗಂಟೆಯ ತನಕ ಬೇರೆ ಮಕ್ಕಳು ಜನಿಸಿರಲಿಲ್ಲ. ಗೋಲಿ ಮಾತ್ರ ಜನಿಸಿದ್ದಳು. ಹುಟ್ಟಿದ ಮಗುವನ್ನು ಎತ್ತಿಕೊಂಡ ವೈದ್ಯರು ಶಿಫಾರಸ್ಸು ಮಾಡಿರುವಂತೆ ಆಕೆಗೆ ಗೋಲಿ ಎಂಬುದಾಗಿ ಹೆಸರಿರಿಸಿದ್ದೇವೆ. ಆಕೆಯ ಇನ್ನೊಂದು ಹೆಸರು ತೇಜಸ್ವಿನಿ ಎಂದಾಗಿದ್ದರೂ, ಸಂಬಂಧಿಗಳು ಮತ್ತು ನೆರೆಯವರು ಪ್ರೀತಿಯಿಂದ ಮಗುವನ್ನು ಗೋಲಿ ಎಂಬುದಾಗಿಯೇ ಕೂಗುತ್ತಾರೆ" ಎಂದೆನ್ನುತ್ತಾರೆ ವಿಜು ಚೌವಾಣ್.

ಅಂದಿನ ಆ ಭಯಾನಕ ರಾತ್ರಿ ಆಸ್ಪತ್ರೆಯ ಹೊರಗಡೆ ಏನು ನಡೆಯಿತು ಎಂಬುದನ್ನು ಮರೆಯಲು ಸಾಧ್ಯವೇ ಆಗುತ್ತಿಲ್ಲ ಅಂತಾರೆ ಶ್ಯಾಮ್ ಲಕ್ಷ್ಮಣ್ ಚೌವಾಣ್. ಶ್ಯಾಮ್ ಗೋಲಿಯ ತಂದೆ.

"ಆ ರಾತ್ರಿಯನ್ನು ನೆನಪಿಸಿಕೊಂಡರೆ ಇಂದಿಗೂ ಭಯವಾಗುತ್ತದೆ. ಯಾವಾಗೆಲ್ಲ ಕಾಮಾ ಆಸ್ಪತ್ರೆಗೆ ಹೋಗುತ್ತೇವೆಯೋ ಆವಾಗೆಲ್ಲ ಉಸಿರು ಕಟ್ಟಿದಂತಾಗುತ್ತದೆ. ನಮ್ಮ ಮಕ್ಕಳಿಗೆ ಪೊಲೀಯೋ ಹನಿ ಹಾಕಿಸಲು ತೆರಳುವಾಗ ಆಸ್ಪತ್ರೆಯೊಳಕ್ಕೆ ನುಗ್ಗುವ ಮುನ್ನ ನಾವು ಸುತ್ತುಮುತ್ತೆಲ್ಲ ನೋಡುತ್ತೇವೆ" ಎಂದು ಶ್ಯಾಮ್ ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ