ಭಾರತವನ್ನು ಚೀನವು ತನ್ನ ಆಗ್ಗದ ವಸ್ತುಗಳನ್ನು ಗುಡ್ಡೆ ಹಾಕುವ ಜಾಗ ಎಂಬಂತೆ ಬಳಸುತ್ತಿದ್ದು, ಚೀನ ಉತ್ಪಾದಿತ ವಸ್ತುಗಳನ್ನು ನಿಷೇಧಿಸಬೇಕು ಎಂಬುದಾಗಿ ಒತ್ತಾಯಿಸಿ ಬಲಪಂಥೀಯ ಹಿಂದೂ ಸಂಘಟನೆ ಬಜರಂಗದಳವು ಪ್ರಮುಖ ವಾಣಿಜ್ಯ ಸಂಘಟನೆಗಳು ಹಾಗೂ ಚೇಂಬರ್ ಆಫ್ ಕಾಮರ್ಸ್‌ಗೆ ಗುರುವಾರ ಪತ್ರ ಬರೆದಿದೆ.
"ಚೀನ ವಸ್ತುಗಳು ಗುಣಮಟ್ಟದಲ್ಲಿ ಅತ್ಯಂತ ಕಳಪೆ ಮಟ್ಟದ್ದಾಗಿದ್ದು, ಭಾರತವು ತನ್ನ ಅಗ್ಗದ ವಸ್ತುಗಳನ್ನು ಗುಡ್ಡೆ ಹಾಕುವ ಮಾರುಕಟ್ಟೆ ಎಂಬಂತಾಗಿಸುತ್ತದೆ. ಇದರ ಫಲವಾಗಿ ನಮ್ಮದೇಶದ ಚಿಕ್ಕ ಹಾಗೂ ಗುಡಿ ಕೈಗಾರಿಕೆಗಳು ಮುಚ್ಚುವಂತಾಗಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ" ಎಂಬುದಾಗಿ ಬಜರಂಗದಳ ತನ್ನ ಹೇಳಿಕೆಯಲ್ಲಿ ಹೇಳಿದೆ.
ಚೇಂಬರ್ ಆಫ್ ಕಾಮರ್ಸ್ ಹಾಗೂ ವ್ಯಾಪಾರಿಗಳು ಚೀನದೊಂದಿಗೆ ಎಲ್ಲ ವ್ಯಾಪಾರಿ ಸಂಬಂಧಗಳನ್ನು ಕಡಿದುಕೊಳ್ಳಬೇಕು ಎಂದೂ ಒತ್ತಾಯಿಸಿದೆ.
ಚೀನವು ನಮ್ಮ ದೇಶಕ್ಕೆ ಅತಿದೊಡ್ಡ ಭೀತಿಯಾಗಿದೆ ಮತ್ತು ನಾವು ಚೀನದ ವಸ್ತುಗಳನ್ನು ಬಳಸುವ ಮೂಲಕ ಆ ದೇಶದ ಆರ್ಥಿಕತೆಯನ್ನು ಬಲಪಡಿಸಬಾರದು. ನಾವು ದೇಶಿಯವಾಗಿ ಉತ್ಪಾದಿಸಿದ ವಸ್ತುಗಳನ್ನು ಅವಲಂಭಿಸಬೇಕು ಎಂಬುದಾಗಿ ಬಜರಂಗದಳದ ಸಂಚಾಲಕ ಅಶೋಕ್ ಕಪೂರ್ ತಮ್ಮ ಹೇಳಿಕೆಯಲ್ಲಿ ಅಭಿಪ್ರಾಯಿಸಿದ್ದಾರೆ.